ರಾಯಚೂರು | ಕ್ರಿಕೆಟ್ ಬೆಟ್ಟಿಂಗ್ : ಒರ್ವನ ಬಂಧನ

ಸಾಂದರ್ಭಿಕ ಚಿತ್ರ
ರಾಯಚೂರು :ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ಅವರ ನಿರ್ದೇಶನದ ಮೇರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ, ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗ್ನಲ್ಲಿ ತೊಡಗಿದ್ದ ವ್ಯಕ್ತಿಯೊರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ನವಾಬ್ಗಡ್ಡಾದ ನಿವಾಸಿ ಹಾಗೂ ಹೂವಿನ ವ್ಯಾಪಾರಿಯಾಗಿರುವ ಖಾಲಿದ್ಯಾ (39) ರನ್ನು ವಶಕ್ಕೆ ಪಡೆದಿದ್ದಾರೆ.
ಅವರ ಅಂಗಡಿಯಿಂದ 1,630 ರೂ. ನಗದು, ಕ್ರಿಕೆಟ್ ಬೆಟ್ಟಿಂಗ್ ಚೀಟಿ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಆತನ ಹೇಳಿಕೆಯ ಪ್ರಕಾರ, ಈ ಮೊತ್ತ ಕ್ರಿಕೆಟ್ ಬೆಟ್ಟಿಂಗ್ನಿಂದ ಬಂದದ್ದು, ಮೊಬೈಲ್ ಸಹ ಬೆಟ್ಟಿಂಗ್ಗಾಗಿ ಬಳಸಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಭಾನುವಾರ ರಾತ್ರಿ ಸುಮಾರು 7 ಗಂಟೆಗೆ, ನಗರದ ರಿಲಾಯನ್ಸ್ ಮಾಲ್ ಎದುರಿನ ಹೂವಿನ ಅಂಗಡಿ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ, ನೇತಾಜಿನಗರ ಪಿಎಸ್ಐ ಬಸವರಾಜ ನಾಯಕ, ಪಿಎಸ್ಐ ಮಲ್ಲಪ್ಪ, ಮಹಾಂತೇಶ್, ಚಂದ್ರಶೇಖರ, ಶಿವರಾಜ ಸೇರಿದಂತೆ ಸಿಬ್ಬಂದಿ ಸ್ಥಳಕ್ಕೆ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಈ ಕುರಿತು ತನಿಖೆ ಮುಂದುವರಿದಿದ್ದು, ನೇತಾಜಿನಗರ ಪೊಲೀಸ್ರ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಶಂಸಿಸಿದ್ದಾರೆ.







