ರಾಯಚೂರು | ಜಿಲ್ಲೆಯ ಇಬ್ಬರು ಸಚಿವರಿಂದ ಅಭಿವೃದ್ಧಿ ಕುಂಠಿತ : ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ

ರಾಯಚೂರು: ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಮತ್ತು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜು ಅವರ ನಿರ್ಲಕ್ಷ್ಯದಿಂದಾಗಿ ರಾಯಚೂರು ಜಿಲ್ಲೆಯ ಅಭಿವೃದ್ಧಿ ಹಿನ್ನೆಡೆಯಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ವಿರುಪಾಕ್ಷಿ ಆರೋಪಿಸಿದರು.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರಾಭಿವೃದ್ಧಿ ಇಲಾಖೆಯ ಆಯುಕ್ತರು ಕಳೆದ ಮೂರ್ನಾಲ್ಕು ತಿಂಗಳ ಹಿಂದೆ 40 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಿದರೂ, ಯಾವುದೇ ಕಾಮಗಾರಿಯೂ ಪ್ರಾರಂಭವಾಗಿಲ್ಲ ಎಂದು ಹೇಳಿದ್ದಾರೆ.
ಒಂದು ವಾರದೊಳಗೆ ಕಾಮಗಾರಿಗಳು ಪ್ರಾರಂಭವಾಗದಿದ್ದರೆ, ನಗರದಾದ್ಯಾಂತ ಉಗ್ರಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಫೆ.20 ರಂದು 18 ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿತ್ತು. ಮೇ 16 ರಂದು ಆಯುಕ್ತರು ಕಾಮಗಾರಿಗೆ ಅನುಮೋದನೆ ನೀಡಿದ್ದಾರೆ. ಪಿಡಬ್ಲ್ಯೂಡಿ ಇಲಾಖೆಗೆ ಕಾಮಗಾರಿಗಳನ್ನು ವಹಿಸಲಾಗಿದೆ. ಆದರೆ ಕಳೆದ 5 ತಿಂಗಳ ಕಾಲ ಕಾಮಗಾರಿಗಳು ಪ್ರಾರಂಭವಾಗಿಲ್ಲ. ಸಚಿವರ ಸೂಚನೆ ಮೇರೆಗೆ ಕೆಲಸಗಳು ಸ್ಥಗಿತಗೊಂಡಿರುವುದಾಗಿ ಅವರು ದೂರಿದ್ದಾರೆ.
ಮಾವಿನಕೆರೆ ಅಭಿವೃದ್ದಿ ಕಾಮಗಾರಿ ವೇಳೆ, ಒತ್ತುವರಿತೆಯ ಬದಲು ರಸ್ತೆ ನಿರ್ಮಿಸಿರುವುದಾಗಿ, ನಗರ ಕೃಷ್ಣಗಿರಿ ಹಿಲ್ಸ್‌ನಲ್ಲಿ 10 ಕೆರೆಗಳನ್ನು ನಾಶ ಮಾಡುತ್ತಾ ನಿವೇಶನಗಳಾಗಿ ಪರಿವರ್ತಿಸಿರುವುದಾಗಿ ತಿಳಿಸಿದ್ದಾರೆ. ಸಣ್ಣ ನೀರಾವರಿ ಸಚಿವರು ಕೆರೆ ರಕ್ಷಣೆಗೆ ಹೋರಾಟ ಮಾಡುವುದಾಗಿ ಹೇಳಿದ್ದಾರೆ. ನಗರ ಶಾಸಕರು ನಿಷ್ಕ್ರಿಯರಾಗಿರುವುದಾಗಿ, “ನಮ್ಮ ಸರ್ಕಾರ ಇಲ್ಲ” ಎಂದು ಹೇಳಿ ನುಣಚಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಕೂಡಲೇ ಅಭಿವೃದ್ದಿ ಕಾರ್ಯಗಳು ಪ್ರಾರಂಭವಾಗಬೇಕಾಗಿದ್ದು, ನಗರ ಪ್ರಜ್ಞಾವಂತರಾದ ಜನರು ಹೋರಾಟಕ್ಕೆ ಬೆಂಬಲ ನೀಡುವಂತೆ ಮನವಿ ಮಾಡಿದರು. ನಗರಸಭೆಯಿಂದಲೂ ಯಾವುದೇ ಅಭಿವೃದ್ದಿ ಕಾರ್ಯಗಳು ನಡೆಯುತ್ತಿಲ್ಲ ಹಾಗೂ ಬೀದಿ ದೀಪಗಳು ಅಳವಡಿಸದಿರುವುದಾಗಿ ಅವರು ಸೂಚಿಸಿದರು.
ಈ ವೇಳೆ ರಾಮು ನಾಗರಾಜಗೌಡ, ಹಂಪಯ್ಯ ಸಾಹುಕಾರ, ನರಸಪ್ಪ ಆಶಾಪುರ ಇದ್ದರು







