ರಾಯಚೂರು | ನಗರದ ಮಾವಿನಕೆರೆಗೆ ಜಿಲ್ಲಾಧಿಕಾರಿಗಳು, ಪಾಲಿಕೆಯ ಆಯುಕ್ತರು ಭೇಟಿ

ರಾಯಚೂರು: ನಗರದ ಮಾವಿನಕೆರೆ ಪ್ರದೇಶಕ್ಕೆ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಹಾಗೂ ಮಹಾನಗರ ಪಾಲಿಕೆಯು ಆಯುಕ್ತರಾದ ಜುಬಿನ್ ಮೊಹಪಾತ್ರ ಅವರು ಜು.21ರಂದು ಭೇಟಿ ನೀಡಿ ಪರಿಶೀಲಿಸಿದರು.
ಇದೆ ವೇಳೆ ಅವರು, ಕೆರೆ ಅಭಿವೃದ್ಧಿ ಕಾಮಗಾರಿಯ ವೀಕ್ಷಣೆ ನಡೆಸಿದರು. ಮಾವಿನಕೆರೆಗೆ ಬೇರೆ ಬೇರೆ ಕಡೆಗಳಿಂದ ಗಟಾರು ನೀರು ಹರಿದು ಬಂದು ಕೆರೆಯ ನೀರು ಕಲುಷಿತವಾಗುತ್ತಿದೆ ಎಂದು ಸಾರ್ವಜನಿಕರು ದೂರುತ್ತಿರುವ ಹಿನ್ನೆಲೆಯಲ್ಲಿ ಗಟಾರು ನೀರು ಕೆರೆಗೆ ಹರಿಯದೇ ಬೇರೆಡೆ ಸಾಗಿಸುವ ಬಗ್ಗೆ ಇದೆ ವೇಳೆ ಚರ್ಚಿಸಲಾಯಿತು.
ಸಾರ್ವಜನಿಕರು ಕೆರೆಗೆ ಕಸ ಮತ್ತು ಪ್ಲಾಸ್ಟಿಕ್ ಎಸೆಯದಂತೆ ಕೆರೆಯ ಸುತ್ತಲು ಕಾವಲು ವ್ಯವಸ್ಥೆಯನ್ನು ಸಿಬ್ಬಂದಿಯ ಮೂಲಕ ಖಾಯಂಗೊಳಿಸುವುದರ ಬಗ್ಗೆ ಸಹ ಇದೆ ವೇಳೆ ಚರ್ಚಿಸಲಾಯಿತು.
ಇದೆ ವೇಳೆ ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಇನ್ನೀತರರು ಇದ್ದರು.
Next Story





