Raichur | ಉನ್ನತ ಶಿಕ್ಷಣ ಪರಿಷತ್ತಿಗೆ ಡಾ.ರಜಾಕ್ ಉಸ್ತಾದ್ ನಾಮನಿರ್ದೇಶನ

ರಾಯಚೂರು: ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿಗೆ ರಾಯಚೂರಿನ ಶಿಕ್ಷಣ ತಜ್ಞ ಡಾ. ರಜಾಕ್ ಉಸ್ತಾದ್ ಸೇರಿದಂತೆ ಇಬ್ಬರನ್ನು ನೂತನ ಸದಸ್ಯರನ್ನಾಗಿ ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದೆ.
ಉನ್ನತ ಶಿಕ್ಷಣ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿಗೆ ಈ ಹಿಂದೆ ಸರ್ಕಾರದಿಂದ ಸದಸ್ಯರಾಗಿ ನೇಮಕಗೊಂಡಿದ್ದ ಡಾ.ಎಚ್.ಸಿ.ಬೋರಲಿಂಗಯ್ಯ ಹಾಗೂ ಪ್ರೊ.ಎಸ್.ಎ.ಪಾಟೀಲ್ ಅವರು 70 ವರ್ಷ ವಯಸ್ಸು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ತೆರವಾಗಿದ್ದ ಎರಡು ಸದಸ್ಯ ಸ್ಥಾನಗಳಿಗೆ ನೂತನ ನೇಮಕ ಮಾಡಲಾಗಿದೆ.
ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಧಿನಿಯಮ-2010ರ ಕಲಂ 13ರ ಅಡಿಯಲ್ಲಿ ಉಳಿದ ಅವಧಿಗೆ, ಅಂದರೆ 2029ರ ಜೂನ್ 9ರವರೆಗೆ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ. ನೂತನ ಸದಸ್ಯರಾಗಿ ರಾಯಚೂರಿನ ಡಾ. ರಜಾಕ್ ಉಸ್ತಾದ್ (ಎಂ.ಎಸ್ಸಿ., ಪಿಎಚ್.ಡಿ.) ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ. ಎಚ್.ಜೆ. ಜಯಕೃಷ್ಣ ಅವರನ್ನು ನಾಮನಿರ್ದೇಶನ ಮಾಡಲಾಗಿದೆ.
Next Story




