ರಾಯಚೂರು | ಕೃಷಿ ವಿವಿಯಲ್ಲಿ ಶೈಕ್ಷಣಿಕ ಚಿಂತನಾ ಸಮಾರಂಭ

ರಾಯಚೂರು: ಪ್ರಾಮಾಣಿಕ ಹಾಗೂ ನಿಷ್ಠೆಯಿಂದ ಸೇವೆ ಸಲ್ಲಿಸಿದ ಪರಿಣಾಮವಾಗಿ ವಿವಿಧ ಹಂತದ ಹುದ್ದೆಗಳಲ್ಲಿ ಸೇವೆಯನ್ನು ಆರ್.ಇಂದಿರಾ ಅವರು ಸಲ್ಲಿಸಿದ್ದಾರೆ ಎಂದು ಶ್ರೀಕಪಿಲ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ನುಡಿದರು.
ನಗರದ ಕೃಷಿ ವಿಜ್ಞಾನಗಳ ವಿವಿಯ ಬಸವೇಶ್ವರ ಸಭಾಂಗಣದಲ್ಲಿ ಶನಿವಾರ ಉಪನಿರ್ದೇಶಕರ(ಅಭಿವೃದ್ಧಿ) ಹಾಗೂ ಡಯಟ್‍ನ ಪ್ರಾಚಾರ್ಯರಾದ ಆರ್.ಇಂದಿರಾ ಅವರು ನಿವೃತ್ತಿ ಹೊಂದಿರುವ ಹಿನ್ನೆಲೆಯಲ್ಲಿ ಅಭಿನಂದನೆ ಹಾಗೂ ಶೈಕ್ಷಣಿಕ ಚಿಂತನಾ ಸಭೆ ಉದ್ಘಾಟಿಸಿದ ಮಾತನಾಡಿದರು.
ಈ ವೇಳೆ ದೇವದುರ್ಗ ಶಾಸಕರಾದ ಕರಿಯಮ್ಮ ನಾಯಕ ಅವರು ಮಾತನಾಡಿ, ನಿಷ್ಠಾವಂತ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದ ಆರ್.ಇಂದಿರಾ ಅವರು ಶಿಕ್ಷಣ ಕ್ಷೇತ್ರಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಅವರಿಗೆ ದೇವರು ಆರೋಗ್ಯ ನೀಡಲಿ ಎಂದು ಶುಭ ಕೋರಿದರು.
ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಡಾ.ಯಶೋಧ, ಸಿದ್ದಾರ್ಥ ಮಲ್ಲಿಕಾರ್ಜುನ ಸ್ವಾಮಿ, ಶಿಕ್ಷಕರಾದ ಮಾಕಣ್ಣ ಮಾತನಾಡಿದರು.
ಇದೇ ಸಂದರ್ಭದಲ್ಲಿ ಶೈಕ್ಷಣಿಕ ಚಿಂತನಾ ಕುರಿತು "ಶಿಕ್ಷಕರಲ್ಲಿ ಕಾಯಕ ಪ್ರಜ್ಞೆ" ಈ ವಿಷಯದ ಕುರಿತು ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾನಿಲಯದ ಸಂಚಾಲಕರಾದ ರಾಜಯೋಗಿಣಿ ಸ್ಮಿತಾ ಹಿತನುಡಿಗಳನ್ನಾಡಿದರು.
ಪ್ರಾಸ್ತಾವಿಕವಾಗಿ ಆರ್.ಇಂದಿರಾ ಅವರು ಮಾತನಾಡಿದರು. ಕೂಡ್ಲಿಗಿಯ ಶ್ರೀ ಮೃತ್ಯುಂಜಯ ಬಾಬಾ ಮಹಾರಾಜ್, ಮಾಜಿ ಸಚಿವ ಶಿವನಗೌಡ ನಾಯಕ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ಕೃಷ್ಣ ಶಾವಂತಗೇರಾ. ಯಾದಗಿರಿಯ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ರಾಯಪ್ಪಗೌಡ, ಶಹಪೂರಿನ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವರಾಜ್ ಶರಭಯ್ಯ, ಯರಮರಸ್ ಡಯಟನ, ನಿವೃತ್ತ ಪ್ರಾಂಶುಪಾಲರಾದ, ಮಲ್ಲಿಕಾರ್ಜುನ್ ಸ್ವಾಮಿ, ಬಿಇಒ ಈರಣ್ಣ ಕೋಸಗಿ, ನಿವೃತ್ತ ನೌಕರರ ಸಂಘದ ಜಿಲ್ಲಾ ಅಧ್ಯಕ್ಷರಾದ, ಏಗನೂರು ಮಹಾದೇವಪ್ಪ ಹಾಗೂ ಮತ್ತಿತರರಿದ್ದರು. ಮಹಾಲಕ್ಷ್ಮೀ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಸಜ್ಜಲ ಸ್ವಾಗತಿಸಿದರು. ಗಿರಿಜಾ ಹಾಗೂ ಡಾ.ಬಿ.ವಿಜಯ ರಾಜೇಂದ್ರ ನಿರೂಪಿಸಿ, ವಂದಿಸಿದರು.
ಡಯಟ್ ಯರಮರಸನ ಹಿರಿಯ ಉಪನ್ಯಾಸಕರಾದ ಶಿವಮ್ಮ, ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರರೆಡ್ಡಿ, ಮಲ್ಲೇಶ್ ನಾಯಕ್, ಗದ್ದಿ ಬಸಪ್ಪ, ಹೀರಾಲಾಲ್, ನಿವೃತ್ತ ಶಿಕ್ಷಕರಾದ ದಾನಮ್ಮ ಹಾಗೂ ಮತ್ತಿತರರಿದ್ದರು.







