ರಾಯಚೂರು | ಎಂ.ಎಂ ಜೋಶಿ ಆಸ್ಪತ್ರೆಯಿಂದ ಸೆ.8ರಂದು ನೇತ್ರದಾನ ಜಾಥಾ

ರಾಯಚೂರು : ಎಂ. ಎಂ ಜೋಶಿ ಕಣ್ಣಿನ ಆಸ್ಪತ್ರೆಯ ವತಿಯಿಂದ ಆಗಸ್ಟ್ 25 ರಿಂದ ಸೆಪ್ಟೆಂಬರ್ 8 ರವರೆಗೆ ನೇತ್ರದಾನದ ಬಗ್ಗೆ ಜಾಗೃತಿ ಮೂಡಿಸಲು ನೇತ್ರದಾನ ಜಾಥಾ ನಡೆಯಲಿದೆ. ಇದರ ಭಾಗವಾಗಿ ಸೆ.8ರಂದು ರಾಯಚೂರಿನಲ್ಲಿ ಜಾಥಾ ನಡೆಯಲಿದೆ ಎಂದು ಎಂ. ಎಂ ಜೋಶಿ ಕಣ್ಣಿನ ಆಸ್ಪತ್ರೆಯ ಶಾಖಾ ಮುಖ್ಯಸ್ತೆ ಸುಧಾ ಪಾಟೀಲ್ ತಿಳಿಸಿದರು.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸುಧಾ ಪಾಟೀಲ್, ಸೆಪ್ಟೆಂಬರ್ 8 ಸೋಮವಾರ ಬೆಳಿಗ್ಗೆ 9:00ಕ್ಕೆ ಅಂಬೇಡ್ಕರ್ ವೃತ್ತದಿಂದ ಜಾಥಾ ಆರಂಭವಾಗಲಿದೆ. ಜಾಥಾದಲ್ಲಿ ಶ್ರೀ ಶಾಂತಮಲಯ್ಯ ಶಿವಾಚಾರ್ಯ ಸ್ವಾಮೀಜಿಗಳು, ಜಿಲ್ಲಾಧಿಕಾರಿ ಕೆ. ನಿತೀಶ್, ಎಸ್‌ಪಿ ಎಂ. ಪುಟಮಾದಯ್ಯ, ಡಿಎಚ್ಒ ಡಾ. ಸುರೇಂದ್ರ ಬಾಬು, ಎಂ. ಎಂ. ಜೋಶಿ ನೇತ್ರಾ ವಿಜ್ಞಾನ ಸಂಸ್ಥೆಯ ಡಾ. ಶೋಯೆಬ್ ಉಸ್ಮಾನ್, ಶಿರಾಜ್ ಅಲಪತಿ, ಕುತುಬುದಿನ್ ಮುಲ್ಯಾ ,ರಾಜೇಂದ್ರ ಶಿವಾಳಿ, ರಾಘವೇಂದ್ರ ನವಲಗುಂದ, ಶೈಲಜಾ ಹಂಪಣ್ಣವರ ಅನೇಕ ಗಣ್ಯರು, ಸ್ವಯಂ ಸೇವಾ ಸಂಸ್ಥೆಗಳು, ವೈದಕೀಯ, ಅರೆ ವೈದಕೀಯ ವಿದ್ಯಾರ್ಥಿಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ನೇತ್ರಾದಾನ ಘೋಷಣೆಗಳೊಂದಿಗೆ ಪಾಲ್ಗೊಳ್ಳುವರು ಎಂದರು.
ನೇತ್ರಾದಾನ ಜಾಥಾ ಅಂಬೇಡ್ಕರ್ ಸರ್ಕಲ್ ಪ್ರಾರಂಭಗೊಂಡು, ಬಸ್ ನಿಲ್ಧಾಣ , ಟಿಪ್ಪು ಸುಲ್ತಾನ್ ರೋಡ್, ಗಾಂಧಿ ಚೌಕ್, ಬಸವೇಶ್ವರ ಸರ್ಕಲ್ ಮುಖಾಂತರ ಲಿಂಗಸಗೂರು ರಸ್ತೆಯಲ್ಲಿ ಇರುವ ಎಂ. ಎಂ. ಜೋಶಿ ನೇತ್ರಾ ವಿಜ್ಞಾನ ಸಂಸ್ಥೆಗೆ ತಲುಪಲಿದೆ ಎಂದರು.
ನೇತ್ರದಾನ ಜಾಥಾ ಮುಗಿದ ಬಳಿಕ 2024-2025ನೇ ಸಾಲಿನಲ್ಲಿ ಕಣ್ಣು ದಾನಮಾಡಿರುವವರ ಕುಟುಂಬದ ಬಂಧುಗಳಿಗೆ ಪಶಸ್ತಿ ಪತ್ರ ನೀಡಿ ಸನ್ಮಾನಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಡಾ. ಶೋಯೆಬ್ ಉಸ್ಮಾನ, ಡಾ. ಶ್ರೀರಾಜ್ ಉಪಸ್ಥಿತರಿದ್ದರು.







