ರಾಯಚೂರು ಉತ್ಸವ : ಜ.19ರಂದು ಖೋಖೋ ಸ್ಪರ್ಧೆ

ನಿತೀಶ್ ಕೆ.
ರಾಯಚೂರು : ರಾಯಚೂರು ಜಿಲ್ಲೆಯಲ್ಲಿ ಜನವರಿ-2026ರ ಮಾಹೆಯಲ್ಲಿ ಜರುಗುವ ಎಡೆದೊರೆ ನಾಡು ರಾಯಚೂರು ಜಿಲ್ಲಾ ಉತ್ಸವ 2026ರ ಕಾರ್ಯಕ್ರಮದಲ್ಲಿ ವಿವಿಧ ಕ್ರೀಡೆಗಳನ್ನು ಆಯೋಜಿಸಲಾಗಿದೆ.
ಜ.19, 20ರಂದು ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 9 ಗಂಟೆಗೆ ರಾಜ್ಯ ಮಟ್ಟದ ಖೋಖೋ ಸ್ಪರ್ಧೆಯನ್ನು ಆಯೋಜನೆ ಮಾಡಲಾಗಿದೆ. ಆಸಕ್ತರು ಈ ಪಂದ್ಯಗಳ ನೋಡಲ್ ಅಧಿಕಾರಿಗಳಾದ ಸಿಂಧನೂರಿನ ಟಿಪಿಇಒ ಸೋಮಲಿಂಗಪ್ಪ ಮೊಬೈಲ್ ಸಂಖ್ಯೆ: 7975743096 ಅಥವಾ ದೈಹಿಕ ಶಿಕ್ಷಕರಾದ ನರಹರಿರಾವ್ ಅವರ ಮೊಬೈಲ್ ಸಂಖ್ಯೆ: 9880184457ಗೆ ಸಂಪರ್ಕಿಸಿ ತಂಡದ ಹೆಸರು ನೋಂದಾಯಿಸಬಹುದಾಗಿದೆ.
ಕ್ರೀಡೆಗಳಲ್ಲಿ ಆಸಕ್ತರು ಭಾಗವಹಿಸಿ ರಾಯಚೂರು ಜಿಲ್ಲೆ ಹೆಮ್ಮೆಪಡುವಂತಹ ಕ್ರೀಡೋತ್ಸವ ಮೂಡಿಬರಲು ಸಹಕರಿಸಿ ರಾಯಚೂರು ಉತ್ಸವವನ್ನು ಯಶಸ್ವಿಗೊಳಿಸಲು ಎಲ್ಲಾ ಕ್ರೀಡಾಪಟುಗಳು ಮತ್ತು ಸಾರ್ವಜನಿಕರಲ್ಲಿ ವಿನಂತಿಸಿದೆ ಎಂದು ಅಪರ ಜಿಲ್ಲಾಧಿಕಾರಿಗಳಾದ ಶಿವಾನಂದ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಯಚೂರು ಉತ್ಸವ ಆಚರಣೆ ಅಂಗವಾಗಿ ಎಲ್ಲಾ ತಾಲೂಕುಗಳಲ್ಲಿ ಜ.21ರಂದು ಮ್ಯಾರಾಥಾನ್ ಓಟ ಹಾಗೂ ಜ.25ರಂದು ಸೈಕ್ಲಿಂಗ್ ಅನ್ನು ಸರಕಾರಿ ನೌಕರರಿಗೆ ಮತ್ತು ಸಾರ್ವಜನಿಕರಿಗೆ ಆಯೋಜಿಸುವಂತೆ ಸಂಬಂಧಿಸಿದ ತಹಶೀಲ್ದಾರರಿಗೆ ರಾಯಚೂರು ಉತ್ಸವ ಆಚರಣಾ ಕಾರ್ಯಕಾರಿ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲೆಯ ಜಿಲ್ಲಾಧಿಕಾರಿಗಳಾದ ನಿತೀಶ್ ಕೆ. ಅವರು ಸೂಚಿಸಿದ್ದಾರೆ.







