ರಾಯಚೂರು: ಆರ್‌ಟಿಪಿಎಸ್‍ನ ಘಟಕದಲ್ಲಿ ಬೆಂಕಿ ಆಕಸ್ಮಿಕ; ವಿದ್ಯುತ್ ಉತ್ಪಾದನೆ ಸ್ಥಗಿತ

ರಾಯಚೂರು:ಇಲ್ಲಿಗೆ ಸಮೀಪದ ಶಕ್ತಿನಗರದ ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರ(ಆರ್‌ಟಿಪಿಎಸ್) 4ನೇ ಘಟಕದ ವಾಹಕ ಆಧಾರಸ್ತಂಬ(ಕೇಬಲ್ ಟ್ರೈ)ಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ನಷ್ಟವಾಗಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ಕೇಬಲ್ ಟ್ರೈಗೆ ಬೆಂಕಿ ತಗುಲಿದ ಪರಿಣಾಮ ಆರ್‌ಟಿಪಿಎಸ್‍ನ 4ನೇ ಘಟಕದಿಂದ ವಿದ್ಯುತ್ ಉತ್ಪಾದನೆ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ತಕ್ಷಣ ಸಿಐಎಸ್‍ಐ ತಂಡದವರು ಬೆಂಕಿನ ನಂದಿಸಿದ್ದಾರೆ. ಘಟನಾ ಸ್ಥಳಕ್ಕೆ ಆರ್‌ಟಿಪಿಎಸ್‍ನ ಉನ್ನತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
Next Story





