ರಾಯಚೂರು | ಮರ್ಚೆಡ್ ಸರಕಾರಿ ಶಾಲಾ ಕೋಠಡಿಗೆ ಕಿಡಿಗೇಡಿಗಳಿಂದ ಬೆಂಕಿ: ಲಕ್ಷಾಂತರ ರೂ. ನಷ್ಟ

ರಾಯಚೂರು: ರಾಯಚೂರು ತಾಲೂಕಿನ ಮರ್ಚೆಡ್ ಗ್ರಾಮದ ಸರಕಾರಿ ಕುವೆಂಪು ಮಾದರಿಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಗುರುವಾರ ರಾತ್ರಿ ಕಿಡಿಗೇಡಿಗಳು ಶಾಲಾ ಕೋಠಡಿಗೆ ಬೆಂಕಿ ಹಚ್ಚಿದ್ದು, ಶಾಲೆಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಸಾಮಗ್ರಿ ಸುಟ್ಟು ಕರಕಾಗಿದೆ.
ಯಾರು ಇಲ್ಲದ ಸಮಯದಲ್ಲಿ ಈ ಕೃತ್ಯ ನಡೆದಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಗ್ರಾಮಸ್ಥರು ಈ ಘಟನೆಯನ್ನು ಖಂಡಿಸಿ ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿದ್ದಾರೆ.
ಹಿಂದೆಯೂ ಇದೇ ಶಾಲಾ ಕೊಠಡಿಗೆ ಕಿಡಿಗೇಡಿಗಳು ನುಗ್ಗಿ ಟಿವಿ, ಕಂಪ್ಯೂಟರ್ ಹಾಗೂ ಇತರೆ ಸಾಮಗ್ರಿಗಳನ್ನು ಒಡೆದು ಹಾಳುಮಾಡಿದ್ದರೂ, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಯುವ ಮುಖಂಡ ಮುಜಾಹಿದ್ ಮರ್ಚೆಡ್ ಮಾತನಾಡಿ, ಹಿಂದಿನ ಘಟನೆಯಲ್ಲಿ ಕ್ರಮ ಕೈಗೊಳ್ಳದ ಕಾರಣ ಇಂತಹ ಘಟನೆ ಪುನರಾವರ್ತನೆಗೊಂಡಿದೆ. ಈ ಬಾರಿಯಾದರೂ ಆರೋಪಿಗಳನ್ನು ಬಂಧಿಸಿ ನಷ್ಟವನ್ನು ವಸೂಲಿಸಬೇಕು ಎಂದು ಒತ್ತಾಯಿಸಿದರು.
Next Story





