ರಾಯಚೂರು | ಹಾರ್ಡ್ ವೇರ್ ಅಂಗಡಿಗೆ ಬೆಂಕಿ : ಲಕ್ಷಾಂತರ ರೂ. ನಷ್ಟ

ರಾಯಚೂರು : ನಗರದ ಚಂದ್ರಮೌಳೇಶ್ವರ ವೃತ್ತದ ಬಳಿಯ ರಾಯಚೂರು ಹಾರ್ಡ್ ವೇರ್ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಲಕ್ಷಾಂತರ ರೂಪಾಯಿಯ ವಸ್ತುಗಳು ಸುಟ್ಟು ಕರಕಲಾಗಿವೆ.
ಭಾನುವಾರ ರಾತ್ರಿ ಸುಮಾರು 1 ಗಂಟೆಗೆ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಸ್ಥಳೀಯರು ಅಂಗಡಿ ಮಾಲಕರಿಗೆ ತಿಳಿಸಿದ ಬಳಿಕ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸಿದ್ದಾರೆ ಎಂದು ತಿಳಿದು ಬಂದಿದೆ.
ಆಕಸ್ಮಿಕ ಬೆಂಕಿಯಿಂದ ಅಂಗಡಿಯಲ್ಲಿನ ಪೈಪ್ ಗಳು, ವಾಟರ್ ಟ್ಯಾಂಕ್ ಸೇರಿ ಅನೇಕ ವಸ್ತುಗಳು ಸುಟ್ಟಿದ್ದು, ಅಂದಾಜು 10 ಲಕ್ಷ ರೂ. ನಷ್ಟ ವಾಗಿದೆ ಎಂದು ಹೇಳಲಾಗಿದೆ.
Next Story





