Raichur | ವೈಟಿಪಿಎಸ್‌ನಲ್ಲಿ ಫ್ಲ್ಯಾಶ್ ಓವರ್; ಎಲೆಕ್ಟ್ರಿಷಿಯನ್‌ಗೆ ಗಾಯ

ರಾಯಚೂರು: ನಗರದ ಹೊರವಲಯದ ಯರಮರಸ್ ಬಳಿ ಇರುವ ವೈಟಿಪಿಎಸ್ (YTPS)ನಲ್ಲಿ ಎಲೆಕ್ಟ್ರಿಷಿಯನ್ ಸಿಬ್ಬಂದಿಗೆ ಫ್ಲ್ಯಾಶ್ ಓವರ್ ಸಂಭವಿಸಿ, ಭಾರಿ ಅನಾಹುತವೊಂದು ತಪ್ಪಿದ ಘಟನೆ ನಡೆದಿದೆ.
ವೈಟಿಪಿಎಸ್ ಪ್ಲಾಂಟ್‌ನ ಸ್ವಿಚರ್ ರೂಮ್‌ನಲ್ಲಿ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಏಕಾಏಕಿ ಫ್ಲ್ಯಾಶ್ ಓವರ್ ಸಂಭವಿಸಿದೆ ಎನ್ನಲಾಗಿದೆ. ಘಟನೆಯಲ್ಲಿ ಎಲೆಕ್ಟ್ರಿಷಿಯನ್ ಸಿಬ್ಬಂದಿ ಶ್ರೀರಾಮ್ ರೆಡ್ಡಿ ಅವರ ಕೈ ಹಾಗೂ ಮುಖಕ್ಕೆ ಸುಟ್ಟ ಗಾಯಗಳಾಗಿವೆ.
ಗಾಯಗೊಂಡ ಅವರನ್ನು ತಕ್ಷಣ ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.
ಸ್ವಿಚರ್ ರೂಮ್‌ನಲ್ಲಿ ಫ್ಲ್ಯಾಶ್ ಓವರ್ ಸಂಭವಿಸಲು ಕಾರಣವೇನು ಎಂಬುದು ಇನ್ನಷ್ಟೇ ತಿಳಿದುಬರಬೇಕಿದೆ. ಘಟನೆ ಕುರಿತು ವೈಟಿಪಿಎಸ್ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
Next Story




