ರಾಯಚೂರು | ಎಸ್‌ಡಿಟಿಯು ಪೇಂಟರ್ ಘಟಕ ರಚನೆ : ಅಧ್ಯಕ್ಷರಾಗಿ ರಾಜು, ಉಪಾಧ್ಯಕ್ಷರಾಗಿ ರಿಯಾಝ್ ನೇಮಕ

ರಾಯಚೂರು: ಸೋಶಿಯಲ್ ಡೆಮಾಕ್ರಟಿಕ್ ಟ್ರೇಡ್ ಯೂನಿಯನ್ (ಎಸ್‌ಡಿಟಿಯು) ಜಿಲ್ಲಾ ವ್ಯಾಪ್ತಿಯಲ್ಲಿ ಸೋಮವಾರ ಪೇಂಟರ್ ಅಸೋಸಿಯೇಷನ್ ಘಟಕ ರಚನೆ ಮಾಡಲಾಯಿತು.
ರಾಯಚೂರಿನ ಕಡೇಚೂರ್ ಫಂಕ್ಷನ್ ಹಾಲ್ ನಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ ಪೇಂಟರ್ ಸಂಘದ ಜಿಲ್ಲಾ ಅಧ್ಯಕ್ಷರಾಗಿ ರಾಜು, ಉಪಾಧ್ಯಕ್ಷರಾಗಿ ಮುಹಮ್ಮದ್ ರಿಯಾಝ್, ಕಾರ್ಯದರ್ಶಿಯಾಗಿ ಪೀರು ಪಾಷಾ, ಸಹ ಕಾರ್ಯದರ್ಶಿಯಾಗಿ ಜಾನ್, ಕೋಶಧಿಕಾರಿಯಾಗಿ ಮುಹಮ್ಮದ್ ಅಲ್ತಾಫ್ ಹಾಗೂ ಹದಿನೈದು ಜನ ಕಾರ್ಯಕಾರಿ ಸಮಿತಿಗೆ ಸದಸ್ಯರಾಗಿ ನೇಮಕ ನಡೆಸಲಾಯಿತು.
ಎಸ್‌ಡಿಟಿಯು ರಾಯಚೂರು ಜಿಲ್ಲಾಧ್ಯಕ್ಷ, ರಾಜ್ಯ ಉಸ್ತುವಾರಿ ಮುಹಮ್ಮದ್ ಶಫಿ, ಜಿಲ್ಲಾ ಉಪಾಧ್ಯಕ್ಷ ಡಿ.ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜಾಜ್ ರಾಣಾ ಆಯ್ಕೆ ಚುನಾವಣೆ ಪ್ರಕ್ರಿಯೆ ನಡೆಸಿ ಕೊಟ್ಟರು. ಸುಮಾರು 300ಪೇಂಟರ್ SDTU ಘಟಕ ರಚನೆಯಲ್ಲಿ ಬಾಗವಹಿಸಿದ್ದರು.
Next Story







