Raichur | ಸರಕಾರಿ ಗೌರವದೊಂದಿಗೆ ಮಾಜಿ ಶಾಸಕ ಸೈಯದ್ ಯಾಸೀನ್ ಅವರ ಅಂತ್ಯಕ್ರಿಯೆ

ರಾಯಚೂರು: ರಾಯಚೂರು ನಗರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಸೈಯದ್ ಯಾಸೀನ್ ಅವರ ಅಂತ್ಯಕ್ರಿಯೆಯು ಸೋಮವಾರ ಸರ್ಕಾರಿ ಗೌರವದೊಂದಿಗೆ ನಗರದಲ್ಲಿ ನಡೆಯಿತು.
ನಗರದ ಕೋರ್ಟ್ ಬಳಿಯ ಈದ್ಗಾ ಮೈದಾನದಲ್ಲಿ ಸೈಯದ್ ಯಾಸೀನ್ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತು. ಎಸ್.ಪಿ. ಅರುಣಾಂಗ್ಷುಗಿರಿ ನೇತ್ರತ್ವದಲ್ಲಿ ಪೋಲೀಸರು ಮೃತರ ಗೌರವಾರ್ಥವಾಗಿ ಮೂರು ಸುತ್ತು ಗುಂಡು ಹಾರಸಿ ಗೌರವ ಸಲ್ಲಿಸಿದರು.
ಕಮಲಿವಾಲೆ ಬಾಬಾ ಖಬರಸ್ಥಾನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಅಂತ್ಯಕ್ರಿಯೆಲ್ಲಿ ಪುತ್ರರಾದ ಸೈಯದ್ ಹುಸೇನ್, ಸೈಯದ್ ಸೋಹಲ್,ಸೈಯದ್ ಮೋಸೀನ್,ಅಸಗರ್,ಶಾಸಕರಾದ ಕರಿಯಮ್ಮ ಜಿ ನಾಯಕ, ವಿಧಾನಪರಿಷತ ಸದಸ್ಯ ಎ.ವಸಂತ ಕುಮಾರ, ಮಹ್ಮದ್ ಶಾಲಂ, ಮಾಜಿ ಶಾಸಕ ತಿಪ್ಪರಾಜ ಹವಾಲ್ದಾರ್,ಮಹಾಂತೇಶ ಪಾಟೀಲ್ ಅತ್ತನೂರು. ಚಾಮರಸ ಮಾಲಿ ಪಾಟೀಲ್, ಹಾರೀಸ್ ಸಿದ್ದೀಖಿ, ಅಸ್ಲಂ ಪಾಷಾ, ಡಾ.ರಜಾಕ್ ಉಸ್ತದ್, ಮಹ್ಮದ್ ಫಾರುಖ್, ರವಿ ಜಾಲ್ದಾರ್,ರಾಮಣ್ಣ ಇರಬಗೇರಾ,ಅಮ್ಜದ್ ಸೇಠ್ ಹಟ್ಟಿ, ಅಬ್ದುಲ್ ಹೈ ಫೆರೋಜ್ , ಜಾನ್ ವೆಸ್ಲಿ, ಮಹ್ಮದ್ ಫೀರೋಜ ಹಮರಾಜ್ ಸೇರಿದಂತೆ ಅನೇಕರು ಭಾಗವಹಿಸಿದರು.






