ರಾಯಚೂರು | ಸಾರಿಗೆ ಬಸ್ ಹರಿದು ನಾಲ್ಕು ವರ್ಷದ ಮಗು ಮೃತ್ಯು

ವಿದ್ಯಾಶ್ರೀ
ರಾಯಚೂರು: ಸಾರಿಗೆ ಬಸ್ ಹರಿದು ನಾಲ್ಕು ವರ್ಷದ ಮಗು ಮೃತಪಟ್ಟ ಘಟನೆ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದಲ್ಲಿ ಗುರುವಾರ ನಡೆದಿದೆ.
ಮೃತ ಮಗುವನ್ನು ಗಬ್ಬೂರು ಗ್ರಾಮದ ವಿದ್ಯಾಶ್ರೀ (4) ಎಂದು ಗುರುತಿಸಲಾಗಿದೆ.
ಗಬ್ಬೂರಿನಿಂದ ಮದರಕಲ್ಗೆ ತೆರಳುತ್ತಿದ್ದ ಸಾರಿಗೆ ಬಸ್ಸಿನ ಚಕ್ರದಡಿಗೆ ಸಿಲುಕಿ ಮಗು ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಗಬ್ಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





