ರಾಯಚೂರು | ನಿವೇಶನ ಮಾರಾಟ ಮಾಡಿಸುವುದಾಗಿ ಹೇಳಿ ವಂಚನೆ!
ರಾಯಚೂರು : ನಕಲಿ ದಾಖಲೆ ಸೃಷಿಸಿ ಆಸ್ತಿ ವಂಚಿಸುವ ಜಾಲದ ಮತ್ತೊಂದು ಪ್ರಕರಣ ಬಯಲಾಗಿದೆ. ಆಸ್ತಿಯ ದಾಖಲೆಗಳು ಮಾತ್ರವಲ್ಲ, ಮಾಲಕರನ್ನು ನಕಲಿ ಮಾಡುತ್ತಿರುವ ಜಾಲದಲ್ಲಿ ಎಲ್ಲ ದಾಖಲೆಗಳನ್ನು ನಕಲಿ ಮಾಡಿ ಮಹಾನಗರ ಪಾಲಿಕೆ, ಸಬ್ ರಿಜಿಸ್ಟ್ರಾರ್ ಕಚೇರಿ ಸಿಬ್ಬಂದಿ ಸಹಕಾರದಿಂದ ಅಸ್ತಿ ಲಪಾಟಿಸಲು ಹೋಗಿರುವ ಘಟನೆ ಪಶ್ಚಿಮ ಪೊಲಿಸ್ ಠಾಣೆಯಲ್ಲಿ ನಡೆದಿದೆ ಎಂದು ತಿಳಿದುಬಂದಿದ್ದು, ನಗರದ ಅರಬ್ ಮೊಹಲ್ಲಾದ ನಿವಾಸಿ ನಿವೇಶನ ಮಾಡಲು ಪರಿಚಯಿಸ್ಥರಿಗೆ ದಾಖಲೆ ನೀಡಿದ್ದು, ಆಸ್ತಿ ಮಾರಾಟ ಮಾಡುವ ಮುನ್ನವೇ ಬೇರೆಯವರ ಹೆಸರಿಗೆ ವರ್ಗಾವಣೆ ಮಾಡಿರುವ ಪತ್ತೆಯಾಗಿರುವುದು ಬೆಚ್ಚಿ ಬೀಳುವಂತಾಗಿದೆ.
ಅರಬ್ ಮೊಹಲ್ಲಾ ನಿವಾಸಿ ರಝಿಯಾ ಬೇಗಂ ಗಂಡ ಶೇಕ್ ಬಡೇಸಾಬ ಎಂಬವರಿಗೆ ವಂಚನೆಯಾಗಿದೆ. ಶೇಕ್ ಬಡೇಸಾಬ್ ಇವರು ಸೈಯದ್ ಪೀರನ್ ಎಂಬವವರಿಂದ ಪ್ಲಾಟ್ ನಿವೇಶನವನ್ನು ಖರೀದಿಸಿದ್ದರು. 2003ರಲ್ಲಿ ರಜಿಯಾ ಬೇಗಂ ಹೆಸರಿನಲ್ಲಿ ನೊಂದಣಿಯಾಗಿ ಮುಟ್ಯೇಷನ್, ಇ-ಖಾತಾ ಮಾಡಿಸಿಕೊಂಡಿದ್ದರು. 2022 ರಲ್ಲಿ ನಿವೇಶನ ಮಾರಾಟ ಮಾಡಲು ಎಂ.ಡಿ.ಜಾವಿದ್ ಮತ್ತು ಅಕ್ಷಯ ಕುಮಾರ ಭಂಡಾರಿ ಈ ಪ್ಲಾಟ್ ಮಾರಾಟ ಮಾಡಿಸುವುದಾಗಿ ದಾಖಲೆ ಪಡೆದಿದ್ದರು.
ಕೆಲ ದಿನಗಳ ನಂತದ ದಾಖಲೆ ಪರಿಶೀಲಿಸಿದಾಗ ಇಲಿಯಾಸ ಬಾಬಾ ಅಲಿಯಾಸ್ ಬಾಬಾ ಶೇಖ್ ರಸೂಲ್ ಇವರ ಹೆಂಡತಿ ಶಮೀಮ್ ಬಾನು ಇವರ ಹೆಸರಿಗೆ ಗಿಫ್ಟ್ ಡೀಡ್ ಮಾಡಿಕೊಟ್ಟಿರುವುದು ಪತ್ತೆಯಾಯಿತು. 2024 ಜು.26 ರಂದು ಸ್ತಿಯನ್ನು ರಿಯಾಜ್ ತಂದೆ ಶೇಖ್ ರಸೂಲ್ ಇವರ ಅತ್ತಿಗೆ ಶಮೀನ್ ಬಾನು ಹೆಸರಿಗೆ ಮಾಡಿ ನೊಂದಣಿ ಕಚೇರಿಯಲ್ಲಿ ನೊಂದಣಿ ಮಾಡಿಸಿಕೊಂಡಿದ್ದಾರೆ. ನಕಲಿ ಇ-ಖಾತಾ, ಮುಟ್ಯೇಷನ್, ಕಟ್ಟಡ ಅನುಮತಿ ಪತ್ರ ಸೃಷ್ಟಿಸಲಾಗಿದೆ. ವಂಚಿಸುವ ಉದ್ದೇಶದಿಂದ ನಕಲಿ ದಾಖಲೆ ಸೃಷ್ಟಿಸಿರುವ 16 ಜನರ ವಿರುದ್ದ ಪಶ್ಚಿಮ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಹಮ್ಮದ ಜಾವೀದ್, ಅಕ್ಷಯ ಕುಮಾರ ಭಂಡಾರಿ, ಇಲಿಯಾಸ್ ಬಾಬಾ, ರಿಯಾಝ್ ಶೇಖ್, ಶಮೀನ್ ಬಾನು ಇಲಿಯಾಸ್ ಬಾಬಾ, ನೊಂದಣಿ ಅಧಿಕಾರಿ ಸಲೀಂ ಮಹಿನುದ್ದೀನ್, ಸಬ್ ರಜಿಸ್ಟ್ರಾರ್ ನಾರಾಯಣಿ, ಎಫ್‌ಡಿಸಿ ಸುರೇಶ, ಮಹಾನಗರ ಪಾಲಿಕೆ ನಿರ್ಗಮನ ಆಯುಕ್ತ ಗುರುಸಿದ್ದಯ್ಯ ಹೀರೆಮಠ, ಜೆಇ ರಾಹುಲ್ ಕುಬೇರ, ಕೇಸ್ ವರ್ಕರ್ ಜಂಪಾರೆಡ್ಡಿ, ಪಾಲಿಕೆ ಕಂದಾಯ ಅಧಿಕಾರಿ ಮರೆಪ್ಪ, ರಾಮು ಕ್ಯಾಷಿಯರ್, ಶಂಶು ಬಿಲ್ ಕಲೆಕ್ಟರ್, ಸುರೇಶ ಟೆಕ್ನಿಕಲ್ ಆಫೀಸರ್, ಕಂಪ್ಯೂಟರ್ ಆಪರೇಟರ್ ಸುರೇಶ ವಿರುದ್ಧ ಪ್ರಕರಣ ದಾಖಲಾಗಿದೆ.
ಎಂ.ಡಿ.ಜಾವಿದ್ ಮತ್ತು ಅಕ್ಷಯ ಕುಮಾರ ಭಂಡಾರಿ ಎಂಬವರ ವಿರುದ್ದ ನಕಲಿ ದಾಖಲೆ ಸೃಷ್ಟಿಸಿರುವ ಪ್ರಕರಣಗಳು ದಾಖಲಾಗಿವೆ. ಮತ್ತಷ್ಟ ವಂಚನೆ ಮಾಡಿರುವ ಆರೋಪಗಳು ಕೇಳಿಬಂದಿವೆ. ಪಾಲಿಕೆ, ಸಬ್ ರಿಜಿಸ್ಟ್ರಾರ್ ಸಿಬ್ಬಂದಿಯೊಂದಿಗೆ ಶಾಮೀಲಾಗಿ ಆಸ್ತಿ ವಂಚಿಸುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ದೂರುಗಳು ಕೇಳಿಬಂದಿವೆ. ಮತ್ತಷ್ಟು ತನಿಖೆ ನಡೆದರೆ ಇನ್ನಷ್ಟು ವಂಚನೆ ಪ್ರಕರಣಗಳು ಬಯಲಾಗಲಿವೆ.







