Raichur | ಬಾಲಭವನದ ವತಿಯಿಂದ ಉಚಿತ ಬೇಸಿಗೆ ಶಿಬಿರ ಸಮಾರೋಪ: ಮಕ್ಕಳ ಪ್ರತಿಭೆಗೆ ವೇದಿಕೆ

ರಾಯಚೂರು: ರಾಯಚೂರು ತಾಲೂಕಿನ ಕಲವಲದೊಡ್ಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾಗಿದ್ದ ‘ಉಚಿತ ಬೇಸಿಗೆ ಶಿಬಿರ’ದ ಸಮಾರೋಪ ಕಾರ್ಯಕ್ರಮ ಬುಧವಾರ ನೆರವೇರಿತು.
ಕರ್ನಾಟಕ ರಾಜ್ಯ ಬಾಲ ಭವನ ಸೊಸೈಟಿ ಬೆಂಗಳೂರು, ರಾಯಚೂರು ಜಿಲ್ಲಾ ಬಾಲ ಭವನ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ 15 ದಿನಗಳ ಕಾಲ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಬಿರದಲ್ಲಿ ಮಕ್ಕಳಿಗೆ ಮೆಹೆಂದಿ, ಚಿತ್ರಕಲೆ, ಸಾಮೂಹಿಕ ನೃತ್ಯ, ಯೋಗ ಹಾಗೂ ವಿವಿಧ ಕರಕುಶಲ ಕೌಶಲ್ಯಗಳ ತರಬೇತಿ ನೀಡಲಾಯಿತು. ಮಕ್ಕಳ ಸೃಜನಶೀಲತೆ ಮತ್ತು ವ್ಯಕ್ತಿತ್ವ ವಿಕಾಸಕ್ಕೆ ಪೂರಕವಾದ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಹನುಮಂತು ಕೋಲೇಶ, “ಮಕ್ಕಳಿಗೆ ಬೇಸಿಗೆ ಶಿಬಿರ ಆಯೋಜಿಸಿ ವಿವಿಧ ಕೌಶಲ್ಯಗಳ ತರಬೇತಿ ನೀಡುತ್ತಿರುವುದು ಶ್ಲಾಘನೀಯ. ಇಂತಹ ಶಿಬಿರಗಳು ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಸಹಕಾರಿಯಾಗುತ್ತವೆ” ಎಂದು ಹೇಳಿದರು.
ಬಳಿಕ ಮಹಿಳಾ ಮತ್ತು ಮಕ್ಕಳ ಅಬಿವೃದ್ದಿ ಇಲಾಖೆಯ ಜಂಡರ್ ತಜ್ಞರಾದ ಗಿರಿಜವ್ವ ಅಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಕ್ಕಳಿಗೆ ಬೇಸಿಗೆ ಶಿಬಿರ ಆಯೋಜಿಸಿ ವಿವಿಧ ಕರಕುಶಲ ತರಬೇತಿ ನೀಡಿದ್ದು ಶ್ಲಾಘನೀಯ ಇದರಿಂದ ವ್ಯಕ್ತಿತ್ವ ವಿಕಾಸನಕ್ಕೆ ಸಹಾಯವಾಗಲಿದೆ ಎಂದರು.
ಶಾಲಾ ಮೇಲುಸ್ತುವಾರಿ ಸಮಿತಿ(ಎಸ್ ಡಿಎಂಸಿ) ಉಪಾಧ್ಯಕ್ಷ ಮೌನೇಶ, ಗ್ರಾಮ ಪಂಚಾಯತಿ ಹಾಲಿ ಸದಸ್ಯರಾದ ಆಂಜನೇಯ, ಗಿರಿಧರ್ ರೆಡ್ಡಿ, ಮಾಜಿ ಅಧ್ಯಕ್ಷೆ ಮಂಗಳನಾಯಕ, ಮಹಿಳಾ ಮತ್ತು ಮಕ್ಕಳ ಅಬಿವೃದ್ದಿ ಇಲಾಖೆಯ ಜಂಡರ್ ತಜ್ಞರಾದ ಗಿರಿಜವ್ವ ಅಕ್ಕಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ, ಬಾಲ ಭವನ ಕಾರ್ಯಕ್ರಮದ ಜಿಲ್ಲಾ ಸಂಯೋಜಕಿ ದೀಪಾ, ಕಚೇರಿ ಸಹಾಯಕಿ ತಾರಮ್ಮ, ಪೋಷಣ ಅಭಿಯಾನದ ಸಹಾಯಕ ಅಮರೇಶ್,ಶಿಕ್ಷಣ ಪ್ರೇಮಿ ಬದ್ರಿ ಜಗನ್ನಾಥ್, ಸಂಪನ್ಮೂಲ ವ್ಯಕ್ತಿ ಮಹಾದೇವಪ್ಪ, ಬುಡ್ಡಣ್ಣ, ಶಶಿಧರ, ಬಾಬು, ಇಂದಿರಾ, ಅಂಗನವಾಡಿ ಕಾರ್ಯಕರ್ತೆ ಅಂಬಮ್ಮ ಉಪಸ್ಥಿತರಿದ್ದರು.






