ರಾಯಚೂರು | ಐಟಾ, ಎಸ್‌ಐಒ ಆಶ್ರಯದಲ್ಲಿ ಸೌಹಾರ್ದ ಇಫ್ತಾರ್ ಕೂಟ

ರಾಯಚೂರು : ಜಿಲ್ಲೆಯ ಸಿಂಧನೂರು ಪಟ್ಟಣದ ಹುದಾ ಮಸೀದಿಯಲ್ಲಿ ಆಲ್ ಇಂಡಿಯಾ ಐಡಿಯಲ್ ಟೀಚರ್ಸ್ ಅಸೊಶಿಯೇಶನ್ ( ಐಟಾ) ಹಾಗೂ ಎಸ್ ಐಒ ಆಶ್ರಯದಲ್ಲಿ ಸೌಹಾರ್ದ ಇಫ್ತಾರ್ ಕೂಟ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ಮುಖ್ಯಗುರು ಹುಸೇನ್ ಬಾಷಾ ಮಾತನಾಡಿ, ಇಂದಿನ ದಿನಗಳಲ್ಲಿ ದೇವಭಯ ಕಡಿಮೆಯಾಗುತ್ತಿದೆ ಹಾಗೂ ನೈತಿಕ ಮೌಲ್ಯಗಳು ಅದಃಪತನವಾಗುತ್ತಿದೆ. ಪ್ರತಿಯೊಬ್ಬ ಮುಸಲ್ಮಾನರ ಮೇಲೆ ರಮಝಾನ್ ಮಾಸದಲ್ಲಿ ಉಪವಾಸ ಕಡ್ಡಾಯ ಗೊಳಿಸಲಾಗಿದೆ. ಎಲ್ಲರೂ ಕಾಮ,ಕ್ರೋಧ, ಮದ, ಮತ್ಸರದಂತಹ ಅರಿಷಡ್ವರ್ಗಗಳನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು ಎಂದು ಸಲಹೆ ನೀಡಿದರು.
ಅತಿಥಿ ಉಪನ್ಯಾಸಕ ಹುಸೇನಪ್ಪ ಅಮರಪೂರ್,ಉಪನ್ಯಾಸಕ ನೂರುದ್ದೀನ್ ಮಾತನಾಡಿದರು.
ಅಸ್ಲಂ ಮಿಟ್ಟಿಮನಿ ಕುರಾನ್ ಪಠಣ ಮಾಡಿದರು. ಈ ಒಂದು ಕಾರ್ಯಕ್ರಮದಲ್ಲಿ ನಗರದ ಎಲ್ಲಾ ಶಿಕ್ಷಕರು, ಉಪನ್ಯಾಸಕರು, ಪದವಿ ವಿದ್ಯಾರ್ಥಿಗಳು ಭಾಗಹಿಸಿದ್ದರು.
ಜಮಾತೆ ಇಸ್ಲಾಮಿ ಹಿಂದ್ ನ ಅದ್ಯಕ್ಷರು ಹುಸೈನ್ ಸಾಬ್, ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಚಂದ್ರಶೇಖರ್ ಹಿರೇಮಠ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲಪ್ಪ, ಪರಸಪ್ಪ, ಆಶೋಕ್ ಗಾಜೀ, ಮತ್ತಿತರರು ಇದ್ದರು.
ಎಸ್ಐಒ ಸಿಂಧನೂರು ತಾಲೂಕಾಧ್ಯಕ್ಷ ಮುಹಮ್ಮದ್ ಇಮ್ತಿಯಾಜ್ ಸ್ವಾಗತಿಸಿದರು. ಉಪನ್ಯಾಸಕ, ಐಟಾ ಕ್ಯಾಂಪಸ್ ಕಾರ್ಯದರ್ಶಿ ಖಾಸಿಂ ಖುರೇಷಿ ನಿರೂಪಿಸಿದರು.







