ರಾಯಚೂರು | ಸಜ್ಜೆ ಗೂಡಿಗೆ ಕಿಡಿಗೇಡಿಗಳಿಂದ ಬೆಂಕಿ : 80 ಸಾವಿರ ರೂ. ಮೌಲ್ಯದ ಬೆಳೆ ನಷ್ಟ

ರಾಯಚೂರು: ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಸಮೀಪದ ಗುರುಗುಂಟಾ ಹೋಬಳಿಯ ಪೈದೊಡ್ಡಿ ಗ್ರಾಮದ ಪದಮ್ಮ ಬಸವರಾಜು ಎಂಬುವವರ ಸಜ್ಜೆ ಗೂಡಿಗೆ ಕಿಡಿಗೇಡಿಗಳು ಬೆಂಕಿ ಹಂಚಿದ ಘಟನೆ ಶನಿವಾರ ರಾತ್ರಿ ನಡೆದಿದೆ.
ಪದಮ್ಮ ಅವರು ತಮ್ಮ ಜಮೀನಿನಲ್ಲಿ ರಾಶಿ ಮಾಡಲು ಸಜ್ಜೆ ಗೂಡು ಹಾಕಿದ್ದರು. ಕಿಡಿಗೇಡಿಗಳು ಶನಿವಾರ ರಾತ್ರಿ ಬೆಂಕಿ ಹಚ್ಚಿದ್ದು ಸಜ್ಜೆ ಗೂಡು ಸುಟ್ಟು ಸಂಪೂರ್ಣ ಬೆಂಕಿಗೆ ಕರಕಲಾಗಿದ್ದು, ಅಂದಾಜು 80 ಸಾವಿರ ರೂ ಮೌಲ್ಯದ ಬೆಳೆ ಹಾಳಾಗಿದೆ.
ರೈತ ಮಹಿಳೆ ಸಾಕಷ್ಟು ಕಷ್ಟ ಪಟ್ಟುಬೆಳೆ ಬೆಳೆದಿದ್ದು, ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ನೀಡಬೇಕು ಎಂದು ರೈತ ಸಂಘದ ಮುಖಂಡರು ಒತ್ತಾಯಿಸಿದ್ದಾರೆ.
Next Story





