ರಾಯಚೂರು | ಆಂಜನೇಯ ದೇವಸ್ಥಾನ ಉದ್ಘಾಟನೆ ವೇಳೆ ಮುರಿದ ಬಿದ್ದ ಗರುಡಸ್ತಂಭ : ತಪ್ಪಿದ ಭಾರಿ ಅನಾಹುತ

ರಾಯಚೂರು : ತಾಲ್ಲೂಕಿನ ಬೀಜನಗೇರಾ ಗ್ರಾಮದಲ್ಲಿ ನೂತನ ಆಂಜನೇಯ ದೇವಸ್ಥಾನ ಉದ್ಘಾಟನೆ ಸಮಾರಂಭದಲ್ಲಿ ಗರುಡಸ್ತಂಭ ಸ್ಥಾಪನೆ ವೇಳೆ ಕಲ್ಲು ಮುರಿದು ಬಿದಿದ್ದು, ಭಾರಿ ಅನಾಹುತ ತಪ್ಪಿದೆ.
ಬೆಳಿಗ್ಗೆ ಆಂಜನೇಯ ದೇವರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ಜರುಗಿತು. ನಂತರ ಗರುಡಸ್ತಂಭ ಸ್ಥಾಪನೆಗೆ ಮುಂದಾದಾಗ ಕ್ರೇನ್ ಮುಖಾಂತರ ಗರುಡಸ್ತಂಭ ಎತ್ತುವ ವೇಳೆಯಲ್ಲಿ ಕಲ್ಲು ಮೂರು ತುಂಡಾಗಿ ನೆಲಕ್ಕೆ ಬಿದ್ದಿದೆ. ಶಾಸಕ ಡಾ. ಶಿವರಾಜ ಪಾಟೀಲ ಸೇರಿದಂತೆ ಗ್ರಾಮಸ್ಥರು ಅಲ್ಲಿಯೇ ಇದ್ದರು. ಅದೃಷ್ಟವಶಾತ್ ಯಾವುದೆ ಅಪಾಯ ಸಂಭವಿಸಿಲ್ಲ. ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು
ಇದಕ್ಕೂ ಮೊದಲು ಕಿಲ್ಲೆ ಬೃಹನ್ಮಠದ ಶಾಂತಮಲ್ಲ ಶಿವಾಚಾರ್ಯ ಹಾಗೂ ಶಾಸಕ ಶಿವರಾಜ ಪಾಟೀಲ ಪೂಜೆ ನೆರವೇರಿಸಿದರು. ರುಡಾ ಮಾಜಿ ಅಧ್ಯಕ್ಷ ತಿಮ್ಮಪ್ಪ ನಾಡಗೌಡ, ವೈ. ಗೋಪಾಲರೆಡ್ಡಿ, ಕಾಂಗ್ರೆಸ್ ಮುಖಂಡ ಕೆ. ಶಾಂತಪ್ಪ, ಡಿ. ಕೆ ಮುರಳಿ ಯಾದವ ಹಾಗೂ ಭಕ್ತರು ಪಾಲ್ಗೊಂಡಿದ್ದರು.
Next Story





