ರಾಯಚೂರು | ಮನ್ಸಲಾಪುರದಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ : ಅಪಾರ ನಷ್ಟ

ರಾಯಚೂರು: ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡು ಮನೆಯ ಬಾಗಿಲು, ಕಿಟಕಿಗಳು ಮುರಿದು, ಧವಸ ಧಾನ್ಯ ಹಾಳಾದ ಘಟನೆ ತಾಲೂಕಿನ ಮನ್ಸಲಾಪುರು ಗ್ರಾಮದಲ್ಲಿ ನಡೆದಿದೆ.
ಗ್ರಾಮ ಪಂಚಾಯತಿಯ ಮಾಜಿ ಅಧ್ಯಕ್ಷ ರಾಮಪ್ಪಗೌಡ ಎನ್ನುವವರ ಮನೆಯಲ್ಲಿ ಕಳೆದ ರಾತ್ರಿ ಘಟನೆ ಸಂಭವಿಸಿದ್ದು, ಅಡುಗೆ ಮಾಡುವಾಗ ಗ್ಯಾಸ್ ಅನಿಲ ಸೋರಿಕೆಯಾಗಿ ಸ್ಫೋಟಗೊಂಡಿದೆ, ಸ್ಫೋಟದ ಬಳಿಕ ರಾಮಪ್ಪ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಕಾರಣ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಘಟನೆಯ ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಮಾಹಿತಿ ಪಡೆದು ಜಾಗೃತಿ ಮೂಡಿಸಿದರು. ಅಧಿಕಾರಿಗಳಾದ ನರಸಪ್ಪ, ಮಲ್ಲಿಕಾರ್ಜುನ ಸಿಬ್ಬಂದಿ ಉಪಸ್ಥಿತರಿದ್ದರು.
ರಾಯಚೂರು ಗ್ರಾಮೀಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
Next Story





