ರಾಯಚೂರು | ಸರಕಾರಿ ಜಾಗ ನೋಂದಾವಣೆ : ಪಿಡಿಓ ವಿರುದ್ಧ ಪಂಚಾಯತ್ ಉಪಾಧ್ಯಕ್ಷೆ, ಸದಸ್ಯರಿಂದ ಆರೋಪ

ರಾಯಚೂರು, ಆ.19: ರಾಯಚೂರು ತಾಲೂಕಿನ ಕಾಡ್ಲೂರು ಗ್ರಾಮ ಪಂಚಾಯತ್ ಪಿಡಿಓ ಅವರು, ಸರಕಾರಿ ಗ್ರಾಮ ಠಾಣಾ ಜಾಗವನ್ನು ಅನಧಿಕೃತವಾಗಿ ತಮ್ಮ ತಂದೆಯ ಹೆಸರಿಗೆ ನೋಂದಾಯಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕಾಡ್ಲೂರು ಗ್ರಾಮ ಸರ್ವೆ ನಂಬರ್ 577ರ 574 ಚ.ಮೀ. ವೀಸ್ತೀರ್ಣದ ಜಮೀನು ಸಾವಿರ ದೇವರ ಹಿರೇಮಠ ಕಾಡ್ಲೂರು ಪರವಾಗಿ ಶರಣಯ್ಯ ತಂ: ರಾಚೋಟಯ್ಯ ಎಂದು ದಾಖಲೆ ಸೃಷ್ಟಿಸಿ ಖಾತಾ ನಕಲು ಮಾಡಿಕೊಳ್ಳಲಾಗಿದೆ.
ಕಾಡ್ಲೂರು ಗ್ರಾಮ ಪಂಚಾಯತ್ ಪಿಡಿಒ ಮಹಾಂತಮ್ಮ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಸರಕಾರಿ ಜಾಗ ನುಂಗಲು ಹುನ್ನಾರ ನಡೆಸಿದ್ದಾರೆ ಎಂದು ಕಾಡ್ಲೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಶಾಂತಮ್ಮ, ಸದಸ್ಯರಾದ ಜಂಶೀರ್, ತಿಮ್ಮಾರೆಡ್ಡಿ, ಅಮರಣ್ಣ, ಎಂ.ಡಿ. ಸಾದಿಕ್, ವಿದ್ಯಾ, ಸೂಗಮ್ಮ ಅಕ್ಕನಾಗಮ್ಮ ಜಿಲ್ಲಾ ಪಂಚಾಯತಿಯ ಸಿಇಒ ಅವರಿಗೆ ದೂರು ಸಲ್ಲಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.
Next Story





