ರಾಯಚೂರು | ರೈಲ್ವೆ ನಿಲ್ದಾಣಕ್ಕೆ ಗುಂತಕಲ್ ಮ್ಯಾನೇಜರ್ ಜಿತೇಂದ್ರ ಕುಮಾರ್ ಭೇಟಿ

ರಾಯಚೂರು: ಅಮೃತ ಭಾರತ್ ಯೋಜನೆಯಡಿಯಲ್ಲಿ ರಾಯಚೂರು ಮತ್ತು ಯಾದಗಿರಿ ರೈಲು ನಿಲ್ದಾಣಗಳಿಗೆ ಎಸ್ಕಲೇಟರ್, ಲಿಫ್ಟ್ ದುರಸ್ತಿ ಹಾಗೂ ಎಲೆಕ್ಟ್ರಿಕ್ ವಾಹನ ಒದಗಿಸುವ ಕೆಲಸ ನಡೆಯುತ್ತಿದೆ. ಬಾಕಿ ಉಳಿದಿರುವ ಕಾರ್ಯಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದು ಗುಂತಕಲ್ ವಿಭಾಗದ ಹಿರಿಯ ಅಧಿಕಾರಿ ಹಾಗೂ ವ್ಯವಸ್ಥಾಪಕ ಜಿತೇಂದ್ರ ಕುಮಾರ್ ತಿಳಿಸಿದ್ದಾರೆ.
ಅವರು ರಾಯಚೂರು ರೈಲು ನಿಲ್ದಾಣದಲ್ಲಿ ನಡೆಯುತ್ತಿರುವ ಕಾಮಗಾರಿಗೆ ಸ್ಥಳ ಪರಿಶೀಲನೆ ನಡೆಸಿ, ಸಂಬಂಧಿತ ಅಧಿಕಾರಿಗಳೊಂದಿಗೆ ವಿಮರ್ಶಾ ಸಭೆ ನಡೆಸಿದರು.
ರೈಲ್ವೆ ಸಲಹಾ ಸಮಿತಿಯ ಸದಸ್ಯರಿಂದ ಸಲಹೆ ಹಾಗೂ ಮನವಿಗಳನ್ನು ಸ್ವೀಕರಿಸಲಾಗಿದೆ. ಲಿಫ್ಟ್ ದುರಸ್ತಿ ಕೆಲಸ 8–10 ದಿನಗಳಲ್ಲಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಕಾಚಿಗುಡಿ ಎಕ್ಸ್‌ಪ್ರೆಸ್ ರೈಲನ್ನು ಸಂಜೆ ಬದಲು ಬೆಳಿಗ್ಗೆ ಆರಂಭಿಸುವಂತೆ ಮನವಿ ಇದೆ. ಕೋವಿಡ್ ಸಮಯದಲ್ಲಿ ನಿಲ್ಲಿಸಲಾಗಿದ್ದ ಗುಲ್ಬರ್ಗ–ಗುಂತಕಲ್ ಪ್ಯಾಸೆಂಜರ್ ರೈಲನ್ನು ಪುನಾರರಂಭಿಸುವ ಬೇಡಿಕೆಯೂ ಬಂದಿದೆ ಎಂದು ಜಿತೇಂದ್ರ ಕುಮಾರ್ ತಿಳಿಸಿದರು.
ಸಭೆಯಲ್ಲಿ ಗುಂತಕಲ್ ವಿಭಾಗದ ಅಧಿಕಾರಿ ಜಗದೀಶ, ರೈಲ್ವೆ ಸಲಹಾ ಸಮಿತಿ ಸದಸ್ಯರು ಎಂ. ಮಾರೆಪ್ಪ, ಎ.ಚಂದ್ರಶೇಖರ್, ರಮೇಶ್, ಸೀತಾ ನಾಯಕ್, ಚಂದ್ರಶೇಖರ ಜಾನೇಕಲ್ ಮತ್ತು ಅಧಿಕಾರಿಗಳಾದ ಸ್ಟೇಷನ್ ಮ್ಯಾನೇಜರ್ ಅಶೋಕ್ ಕುಮಾರ್ ಮೀನಾ, ಸಿಸಿಐ ಹೇಮರಾಜ್ ಗೌಡ, ಎಸ್. ರಾಜು, ಡಾ. ಅಮರ್ ಉಪಸ್ಥಿತರಿದ್ದರು.







