ರಾಯಚೂರು | ಹಟ್ಟಿ ಚಿನ್ನದ ಗಣಿ ಕಂಪನಿಯ ಕಾರ್ಮಿಕ, ಸಿಬ್ಬಂದಿ ಚುನಾವಣೆ
ಸಿಐಟಿಯು ಪಕ್ಷದ ಕೆ.ಮಹಾಂತೇಶ್, ಎಸ್.ಎಂ.ಶಾಫಿಸಾಬ್ ಭರ್ಜರಿ ಗೆಲುವು

ರಾಯಚೂರು: ಹಟ್ಟಿ ಚಿನ್ನದ ಗಣಿ ಸಿಬ್ಬಂದಿ ಹಾಗೂ ಕಾರ್ಮಿಕ ಸಂಘದ ಚುನಾವಣೆಯಲ್ಲಿ ಸಿಐಟಿಯು ಪಕ್ಷದ ಅಧ್ಯಕ್ಷರಾಗಿ ಕೆ.ಮಹಾಂತೇಶ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಎಂ.ಶಾಫಿಸಾಬ್ ಭರ್ಜರಿ ಗೆಲುವು ಸಾಧಿಸಿದ್ದಾರೆ.
ತೀವ್ರ ಕುತೂಹಲ ಮೂಡಿಸಿದ್ದ ಕಾರ್ಮಿಕ ಚುನಾವಣೆಯು ಮುಖ್ಯವಾಗಿ ಕಂಪನಿಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಟಿಯುಸಿಐ ಅಮೀರ್ ಅಲಿ, ಆಕಳ ಪಕ್ಷದ ವಾಲಿಬಾಬು ಹಾಗೂ ಸಿಐಟಿಯು ಎಸ್.ಎಂ.ಶಾಫಿಸಾಬ್ ಇವರುಗಳ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.
ಚುನಾವಣೆಯಲ್ಲಿ ವಾಲಿಬಾಬು 950 ಮತಗಳು, ಎಸ್.ಎಂ.ಶಾಫಿಸಾಬ್ 1,014 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿಗಳಾಗಿದ್ದ ವಿಜಯ ಭಾಸ್ಕರ್ 616 , ಅಮೀರ್ ಅಲಿ 644 ಮತಗಳನ್ನು ಪಡೆದು ಸೋಲನ್ನು ಅನುಭಸಿದ್ದಾರೆ.
ಚುನಾವಣೆಯ ಅಧ್ಯಕ್ಷ ಸ್ಥಾನಕ್ಕೆ ಎಐಟಿಯುಸಿ ಪಕ್ಷ 925 ಮತಗಳು ,ಸಿಐಟಿಯು ಪಕ್ಷ 944 ಮತಗಳು ಪಡೆದು ಭರ್ಜರಿ ಗೆಲುವು ಸಾಧಿಸಿದ್ದಾರೆ. ಸ್ಪರ್ಧಿಸಿದ್ದ ಆಕಳು ಪಕ್ಷ 826, ಟಿಯುಸಿಐ 523 ಹಾಗೂ ವಜ್ರ ಪಕ್ಷ 32 ಮತಗಳು ಪಡೆದು ಸೋತಿದ್ದಾರೆ.
ಮೊದಲನೇ ಸುತ್ತಿನ ಎಣಿಕೆ ಮುಗಿದಿದ್ದು, ಇನ್ನು ಕೆಲವು ಸ್ಥಾನಗಳ ಮತ ಎಣಿಕೆ ಕಾರ್ಯ ನಡೆದಿದೆ.





