ರಾಯಚೂರು | ಮದ್ಯಪಾನ ಮಾಡಿ ಶಾಲೆಗೆ ಬಂದ ಮುಖ್ಯ ಶಿಕ್ಷಕ ಅಮಾನತು

ರಾಯಚೂರು: ಕರ್ತವ್ಯದ ವೇಳೆ ಶಾಲೆಯ ಬಿಸಿಯೂಟ ಕೊಠಡಿಯ ಮುಂದೆ ಮದ್ಯಪಾನ ಮಾಡಿ ಮಲಗಿದ್ದ ಮಸ್ಕಿ ತಾಲೂಕಿನ ಗೋನಾಳ ಕ್ಯಾಂಪ್ ನ ಅಂಬಾದೇವಿನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ನಿಂಗಪ್ಪ ಅವರನ್ನು ಸಿಂಧನೂರು ಕ್ಷೇತ್ರ ಶಿಕ್ಷಣಾಧಿಕಾರಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಮುಖ್ಯಗುರು ನಿಂಗಪ್ಪ ಪ್ರತಿನಿತ್ಯ ಮದ್ಯಪಾನ ಮಾಡಿ ಶಾಲೆಗೆ ಬರುತ್ತಿದ್ದರು ಹಾಗೂ ಮಕ್ಕಳಿಗೆ ಪಾಠ ಮಾಡದೇ ಅಸಭ್ಯವಾಗಿ ವರ್ತಿಸುತ್ತಿದ್ದ ಬಗ್ಗೆ ಪಾಲಕರು ಶಿಕ್ಷಣ ಇಲಾಖೆಗೆ ದೂರು ನೀಡಿದರೂ ಕ್ರಮ ಕೈಗೊಂಡಿರಲಿಲ್ಲ. ಜು.24 ರಂದು ಎಂದಿನಂತೆ ಮದ್ಯಪಾನ ಮಾಡಿ ಶಾಲೆಯ ಬಿಸಿಯೂಟ ಕೋಣೆಯ ಮುಂದೆ ಮಲಗಿದ್ದ ಕುರಿತು ಮಧ್ಯಮಗಳಲ್ಲಿ ವರದಿಯಾಗಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಸಿಂಧನೂರು ಬಿಇಓ, ವಲಯ ಶಿಕ್ಷಣ ಸಂಯೋಜಕರು ಮತ್ತು ಮೂಹ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ) ಮತ್ತು ಕ್ಷೇತ್ರ ಸಂಪನ್ಮೂಲ ವ್ಯಕ್ತಿ (ಬಿಆರ್‌ಪಿ) ಅವರಿಂದ ವರದಿ ಪಡೆದು ಕರ್ತವ್ಯ ಲೋಪ, ದುರ್ನಡತೆ ಆಧಾರದ ಮೇಲೆ ಅಮಾನತು ಮಾಡಿ ಆದೇಶಿಸಿದ್ದಾರೆ.
Next Story





