ರಾಯಚೂರು | ಅಪಘಾತ ತಡೆಗಟ್ಟಲು ಜು.15ರಿಂದ ಜಿಲ್ಲೆಯಲ್ಲಿ ಹೆಲ್ಮೆಟ್ ಕಡ್ಡಾಯ : ಎಸ್ ಪಿ ಪುಟ್ಟಮಾದಯ್ಯ

ಸಾಂದರ್ಭಿಕ ಚಿತ್ರ
ರಾಯಚೂರು: ವಾಹನ ಸವಾರರ ಸುರಕ್ಷತೆ ಮತ್ತು ರಸ್ತೆ ಅಪಘಾತ ತಡೆಗಟ್ಟುವ ನಿಟ್ಟಿನಲ್ಲಿ ರಾಯಚೂರು ಜಿಲ್ಲೆಯಲ್ಲಿ ನಾಳೆಯಿಂದ (ಮಂಗಳವಾರ) ಹೆಲ್ಮೆಟ್ ಕಡ್ಡಾಯ ಮಾಡಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಎಂ. ಪುಟ್ಟ ಮಾದಯ್ಯ ಆದೇಶ ಹೊರಡಿಸಿದ್ದಾರೆ.
ಈ ನಿಯಮವು ರಾಯಚೂರು ಜಿಲ್ಲೆಯಲ್ಲಿರುವ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಗೆ ಸೇರಿದೆ. ದ್ವಿಚಕ್ರ ವಾಹನ ಸವಾರರು ಮತ್ತು ಹಿಂಬದಿಯವರು ಇಬ್ಬರೂ ಸಹ ಹೆಲ್ಮೆಟ್ ಧರಿಸದೇ ಸಿಕ್ಕಿ ಬಿದ್ದಲ್ಲಿ ಕಾನೂನು ಕ್ರಮ ಹಾಗೂ 500 ರೂ. ದಂಡ ಕ್ರಮ ವಿಧಿಸಲಾಗುವುದು ಎಂದು ಎಸ್ ಪಿ ಪುಟ್ಟಮಾದಯ್ಯ ಅವರು ತಿಳಿಸಿದರು.
ಈ ತುರ್ತು ಕ್ರಮವು ಸಾರ್ವಜನಿಕರ ಪ್ರಾಣರಕ್ಷಣೆ ಹಾಗೂ ಅಪಘಾತದ ಪ್ರಮಾಣವನ್ನು ಕಡಿಮೆ ಮಾಡುವ ಉದ್ದೇಶದಿಂದ ಜಾರಿಗೆ ತರಲಾಗುತ್ತಿದೆ. ಸಾರ್ವಜನಿಕರು ತಮ್ಮ ಮತ್ತು ಇತರರ ಜೀವ ರಕ್ಷಣೆಗಾಗಿ ಸಹಕಾರ ನೀಡಬೇಕು. ಕುಡಿದು ವಾಹನ ಚಾಲನೆ ಮಾಡುವವರ ಮೇಲು ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ಪುಟ್ಟ ಮಾದಯ್ಯ ಅವರು ಎಚ್ಚರಿಸಿದ್ದಾರೆ.
Next Story





