ರಾಯಚೂರು: ಸಿಂಧನೂರಿನಲ್ಲಿ ಅನುಗ್ರಹ ಸೌಹಾರ್ದ ಸಹಕಾರಿ ಸಂಘ ಉದ್ಘಾಟನೆ

ರಾಯಚೂರು: ಸಿಂಧನೂರು ಅನುಗ್ರಹ ಸೌಹಾರ್ದ ಸಹಕಾರಿ ಸಂಘ ಶನಿವಾರ ಸಿಂಧನೂರಿನ ಕಾಟಿಬೇಸ್ ನಲ್ಲಿ ಉದ್ಘಾಟನೆಗೊಂಡಿತು. ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯಾಧ್ಯಕ್ಷ ಮುಹಮ್ಮದ್ ಯೂಸೂಫ್ ಕನ್ನಿ ಉದ್ಘಾಟನೆ ಮಾಡಿದರು.
ನಂತರ ಪಟೇಲವಾಡಿ ರಸ್ತೆಯಲ್ಲಿರುವ ಮಸ್ಜಿದ್-ಎ-ಹುದಾದಲ್ಲಿ ನಡೆದ ವೇದಿಕೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಬಸನಗೌಡ ಬಾದರ್ಲಿ ಅವರು, ಅನುಗ್ರಹ ಸೌಹಾರ್ದ ಸಹಕಾರಿ ಸಿಂಧನೂರಿನ ಇತಿಹಾಸದಲ್ಲಿ ಸುವರ್ಣ ಅಕ್ಷರದಲ್ಲಿ ಬರೆದಿದೆ. ಬಡ್ಡಿ ರಹಿತ, ಆಡಳಿತ ಉತ್ತಮ ಹೆಜ್ಜೆ ಇಟ್ಟಿದೆ ಎಂದರು.
ಮುಹಮ್ಮದ್ ಯೂಸೂಫ್ ಕನ್ನಿ ಮಾತನಾಡಿ, ಮನುಷ್ಯರು ಹಲವಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಬಡ್ಡಿ ಕೊಡುವವನು ಬಡ್ಡಿ ತೆಗೆದುಕೊಳ್ಳುವನು ಬಡ್ಡಿಯ ಲೆಕ್ಕ ಬರೆಯುವನು ಬಡ್ಡಿಯ ಸಾಕ್ಷಿಯ ಮೇಲೂ ಶಾಪವಿದೆ ಎಂದು ಕುರ್ ಆನ್ ಹೇಳುತ್ತದೆ, ಬಡ್ಡಿರಹಿತವಾಗಿ ನಡೆಸುವ ಇಂತಹ ಸಂಘಗಳು ಕರ್ನಾಟಕದಲ್ಲಿ 15 ಸಂಸ್ಥೆಗಳಿವೆ ಎಂದು ಹೇಳಿದರು.
ಮಾಜಿ ಸಚಿವ ವೆಂಕಟರಾವ್ ನಾಡಗೌಡ ಮಾತನಾಡಿ, 40 ವರ್ಷಗಳಿಂದ ನಾನು ಸಹಕಾರಿ ಗಳಲ್ಲಿ ಇದ್ದೇನೆ. ಅದರೆ ಬಡ್ಡಿ ರಹಿತ ಸಹಕಾರಿ ಕಾರ್ಯಕ್ರಮ ಮೂದಲ ಬಾರಿಗೆ ನೋಡುತ್ತಿದ್ದೇನೆ. ಮೀಟರ್ ಬಡ್ಡಿ ವ್ಯವಹಾರ ದೇವರು ಮೆಚ್ಚುವುದಿಲ್ಲ. ಸಂಸ್ಥೆ ನಮ್ಮದು ಎಂದು ಬೆಳೆಸಬೇಕು ಎಂದರು.
ಇಮ್ತಿಯಾಝ್ ಬೇಗ್ ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಮೈಕ್ರೋ ಫೈನಾನ್ಸ್ ಸಹುಲತ್ ಸೊಸೈಟೀಸ್ ನ ಸಿಇಒ ಒಸಾಮಾ ಖಾನ್ ಮಾತನಾಡಿ, ಅನುಗ್ರಹದ ಸಂಸ್ಥೆಯ ಮುಖ್ಯ ಉದ್ದೇಶ ಸಮಾಜದಲ್ಲಿ ದುರ್ಬಲ ವರ್ಗದ ಜನರನ್ನು ಮೇಲೆತ್ತುವದು. ಸಮಾಜದಲ್ಲಿ ಬಡ್ಡಿಯ ಕೆಡಕುಗಳು ವೇಗವಾಗಿ ಹರಡುತ್ತಿವೆ. ಈ ಕೆಡುಕನ್ನು ದೂರಿಕರಿಸುವುದೇ ಮುಖ್ಯವಾಗಿದೆ. ಇಸ್ಲಾಂ ಸರ್ವರಿಗೂ ಸಮಾನವಾದ ಹಕ್ಕುಗಳನ್ನು ಕೊಡುತ್ತದೆ. ಆದರೆ ಜಗತ್ತಿನಲ್ಲಿ ಅತಿ ಹೆಚ್ಚು ಸಂಪತ್ತು ಮತ್ತು ಹಣ ಕೆಲವರ ಕೈಯಲ್ಲಿ ಮಾತ್ರ ಇದೆ ಎಂದರು.
ಸೌಹಾರ್ದ ಅಭಿವೃದ್ಧಿ ಅಧಿಕಾರಿ ನಟರಾಜ, ಮೌಲಾನಾ ಮುಹಮ್ಮದ್ ತಾಜೀಮುದ್ದೀನ್ ಇಮಾಮ್ -ಓ-ಖತೀಬ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನುಗ್ರಹ ಸೌ.ಸ.ಸಂ.ನಿ, ಸಿಂಧನೂರು ಅಧ್ಯಕ್ಷರಾದ ಹುಸೇನಸಾಬ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಕೀಲ ಬಾಬರ ಪಾಷ, ಮಿಲಾಪ್ ಶಾದಿ ಮಹಲ್ ಅಧ್ಯಕ್ಷರಾದ ಖಾಜಿ ಜಿಲಾನಿ ಪಾಷಾ, ಲೆಕ್ಕ ಪರಿಶೋಧನಾ ಇಲಾಖೆಯ ಸಹಾಯಕ ನಿರ್ದೇಶಕ ಮಹೆಬೂಬ ಆರ್, ಮೌಲಾನಾ ಸೈಯ್ಯದ್ ಬೈಸರ್ ಖಾದ್ರಿ, ಸೈಯದ್ ಹಾರೂನ್ ಪಾಷ, ಅಲ್ತಾಫ್ ಸಾಬ್ ಸಾಹುಕಾರ ಮುಳ್ಳೂರು, ಅನ್ವರ್ ಪಾಶಾ ಉಮರಿ ಉಪಸ್ಥಿತರಿದ್ದರು.
ರಾಜಹುಸೇನ್ ಕಿರಾಅತ್ ಪಠಿಸಿದರು. ಯಾಖೂಬ ಅಲಿ ಸ್ವಾಗತಿಸಿದರು. ಡಾ ಬಸವರಾಜ ನಾಯಕ್ ನಿರೂಪಿಸಿದರು.







