ರಾಯಚೂರು | ಬೆಂಕಿ ತಗುಲಿ ಸುಟ್ಟು ಕರಕಲಾದ ಜೆಸಿಬಿ ವಾಹನ

ರಾಯಚೂರು : ಸಿಡಿಲು ಬಡಿದು ಬೆಂಕಿ ತಗುಲಿ ಜೆಸಿಬಿ ವಾಹನ ಸಂಪೂರ್ಣ ಸುಟ್ಟು ಕರಗಲಾಗದ ಘಟನೆ ತಾಲೂಕಿನ ಗಣಮೂರು ಗ್ರಾಮದಲ್ಲಿ ನಡೆದಿದೆ.
ಹೊಲದಲ್ಲಿ ನಿಲ್ಲಿಸಿದ ಜೆಸಿಬಿ ವಾಹನಕ್ಕ ಸಿಡಿಲು ಬಡಿದು ಬೆಂಕಿ ತಗುಲಿದ್ದು, ಬೆಂಕಿಗಾಹುತಿಯಾಗಿದೆ ಎನ್ನಲಾಗಿದೆ. ವಿರೇಶ ಎಂಬುವವರಿಗೆ ಸೇರಿದ ಸುಮಾರು 40 ಲಕ್ಷ ರೂ. ಬೆಲೆ ಬಾಳುವ ಜೆಸಿಬಿಗೆ ಬೆಂಕಿ ತಗುಲಿದ್ದು, ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ ಎನ್ನಲಾಗಿದೆ.
Next Story