ರಾಯಚೂರು | ಪಾಲಿಕೆ ಆಯುಕ್ತರಾಗಿ ಜುಬೇನ್ ಅಧಿಕಾರ ಸ್ವೀಕಾರ

ಜುಬೇನ್ ಮೋಹಪಾತ್ರ
ರಾಯಚೂರು : ಮಹಾನಗರ ಪಾಲಿಕೆಯ ನೂತನ ಕಚೇರಿಯಲ್ಲಿ ಪಾಲಿಕೆಯ ಆಯುಕ್ತರಾಗಿ ಜುಬೇನ್ ಮೋಹಪಾತ್ರನ ಅವರು ಇಂದು ಅಧಿಕಾರ ಸ್ವೀಕರಿಸಿದರು.
ಜಿಲ್ಲಾಧಿಕಾರಿ ಕಚೇರಿ ಯಕ್ಲಾಸಪುರ ಬಡಾವಣೆಗೆ ಸ್ಥಳಾಂತರವಾದ ಕಾರಣ ಹಳೆಯ ಕಚೇರಿಯನ್ನು ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಿದ್ದು, ಇಂದು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಆಯುಕ್ತರು ಕಟ್ಟಡದ ಸೌಲಭ್ಯಗಳನ್ನು ವೀಕ್ಷಿಸಿ, ಸ್ಥಳಾಂತರ ಪ್ರಕ್ರಿಯೆ ಸರಾಗವಾಗಿ ಮುಗಿಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಗಜಾನನ ಬಾಳೆ, ಪಾಲಿಕೆಯ ಉಪ ಆಯುಕ್ತ ಗುರುಸಿದ್ದಯ್ಯ ಹಿರೆಮಠ, ವಲಯ ಆಯುಕ್ತ ಮಹೆಬೂಬ್ ಜಿಲಾನಿ, ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.
Next Story





