ರಾಯಚೂರು | ನ.8ರಂದು ಕನಕದಾಸ ಜಯಂತಿ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ : ಕೆ.ಬಸವಂತಪ್ಪ

ರಾಯಚೂರು: ನ.8ರಂದು ಕನಕದಾಸರ ಜಯಂತಿ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಕುರುಬ ಸಮಾಜದ ಜಿಲ್ಲಾಧ್ಯಕ್ಷ ಕೆ.ಬಸವಂತಪ್ಪ ಹೇಳಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಜಿಲ್ಲಾಡಳಿತದ ಸಹಯೋಗದೊಂದಿಗೆ 538ನೇ ಕನಕದಾಸರ ಜಯಂತಿ ಆಚರಿಸಲು ನಿರ್ಧರಿಸಲಾಗಿದೆ. ಅಂದು ಬೆಳಿಗ್ಗೆ ಕನಕದಾಸರ ವೃತ್ತದಿಂದ ಪುತ್ಥಳಿಗೆ ವೀಶೇಷ ಪೂಜೆ ಸಲ್ಲಿಸಿ ಮೆರವಣಿಗೆ ನಡೆಸಲಾಗುತ್ತದೆ. ನೂರು ಡೊಳ್ಳುಗಳೊಂದಿಗೆ ಪೂರ್ಣ ಕುಂಭ, ಕಳಸ ಹಾಗೂ ನಾನಾ ವಾಧ್ಯಗಳೊಂದಿಗೆ ಭಾವಚಿತ್ರ ಮೆರವಣಿಗೆ ನಡೆಯಲಿದೆ. ನಂತರ ಪಂಡಿತ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದರು.
ಸಮಾಜ ಕಾರ್ಯಾಧ್ಯಕ್ಷ ಬಿ.ಬಸವರಾಜ ಮಾತನಾಡಿ, ಕನಕದಾಸ ಜಯಂತಿ ಅಂಗವಾಗಿ ಸಿಂಧೂರಿನ ಕೆ.ಕರಿಯಪ್ಪ ಇವರಿಗೆ ಕನಕ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಅಲ್ಲದೇ ವಿವಿಧ ಕ್ಷೇತ್ರ ಸಾಧನೆಗೈದ ಮಹನೀಯರನ್ನು ಸನ್ಮಾನಿಸಿ ಗೌರವಿಸಲಾಗುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ರಾಜಶೇಖರ ಸುಂಕೇಶ್ವರಹಾಳ, ಸಾಹಿತ್ಯ ಕ್ಷೇತ್ರದಲ್ಲಿ ಡಾ.ರಾಜಶ್ರೀ ಕಲ್ಲೂರಕರ್, ವೈದ್ಯಕೀಯ ಕ್ಷೇತ್ರದಲ್ಲಿ ಡಾ.ಅರುಣ್ ಮಸ್ಕಿ, ಪರಿಸರ ಕ್ಷೇತ್ರದಲ್ಲಿ ಸರಸ್ವತಿ ಕಿಲಕಿಲೆ, ಸಂಗೀತ ಕ್ಷೇತ್ರದಲ್ಲಿ ಸೂಗೂರೇಶ ಅಸ್ಕಿಹಾಳ, ಸಮಾಜ ಸೇವೆಯಲ್ಲಿ ಲಿಂಗಪ್ಪ ಪೂಜಾರ, ಮಾಧ್ಯಮ ಕ್ಷೇತ್ರದಲ್ಲಿ ಶ್ರೀಕಾಂತ ಸಾವೂರ ಇವರಿಗೆ ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಜಯಂತಿ ಸ್ವಾಗತ ಸಮಿತಿ ಅಧ್ಯಕ್ಷ ಶೇಖರ ವಾರದ, ನಗರಸಭೆ ಮಾಜಿ ಸದಸ್ಯ ಈಶಪ್ಪ, ಕೆ.ನಾಗರಾಜ ಮಡ್ಡಿಪೇಟೆ, ನಾಗೇಂದ್ರಪ್ಪ ಮಟಮಾರಿ, ಬಜಾರಪ್ಪ,ಹನುಮಂತಪ್ಪ, ವೆಂಕಟೇಶ ಸೇರಿ ಅನೇಕರಿದ್ದರು.







