ರಾಯಚೂರು | ಯದ್ದಲದೊಡ್ಡಿಯಲ್ಲಿ ಭೂ ಕುಸಿತ : ನಾಲ್ಕು ಮನೆಗಳಿಗೆ ಹಾನಿ

ರಾಯಚೂರು: ಸಿಂಧನೂರು ತಾಲೂಕಿನ ಯದ್ದಲದೊಡ್ಡಿ ಗ್ರಾಮದಲ್ಲಿ ಭೂ ಕುಸಿತದಿಂದ ನಾಲ್ಕು ಮನೆಗಳು ದಿಢೀರ್ ಕುಸಿದು ಸ್ಥಳೀಯರಲ್ಲಿ ಆತಂಕ ಉಂಟಾಗಿದೆ. ಮನೆಗಳ ಒಳಗೇ ನೆಲದಿಂದ ನೀರು ಹೊರಬಂದಿರುವ ಘಟನೆ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.
ಕಳೆದ ಕೆಲವು ವಾರಗಳಿಂದ ಈ ಗ್ರಾಮದಲ್ಲಿ ನಿರಂತರ ಸಮಸ್ಯೆ ಎದುರಾಗುತ್ತಿದೆ. ಇದೇ ತಿಂಗಳಲ್ಲಿ ನಾಲ್ಕು ಮನೆಗಳಲ್ಲಿ ನೆಲ ಅಡಿಯಲ್ಲಿ ದೊಡ್ಡ ಗುಂಡಿಗಳು ಬಿದ್ದು, ಭೂ ಕುಸಿತ ಸಂಭವಿಸಿದ ಘಟನೆ ನಡೆದಿದ್ದು, ಒಬ್ಬ ಮಹಿಳೆ ಅದೃಷ್ಟವಶಾತ್ ಪಾರಾಗಿದ್ದರು. ಇದೀಗ ಮತ್ತೊಂದು ಮನೆಯಲ್ಲಿ ಇದೇ ರೀತಿಯ ಘಟನೆ ನಡೆದಿದೆ.
ಯದ್ದಲದೊಡ್ಡಿ ಗ್ರಾಮದ ರಾಜಶೇಖರೆಡ್ಡಿ, ಗುರ್ರಪ್ಪ ಮೂಡಲಗಿರಿ,ಡಾ.ಕರಿಬಸ್ಸಪ್ಪ, ರಮೇಶ, ಚನ್ನಬಸವ ಮನೆಗಳಲ್ಲಿ ಭೂ ಕುಸಿತವಾಗಿ ಎಲ್ಲೆಂದರೆಲ್ಲಿ ಗುಂಡಿ ಬಿದ್ದಿದೆ. ಬೇಸ್ಮೀಟ್( ನೆಲಹಾಸು) ಹಾಗೂ ಮಣ್ಣು ಕುಸಿದಿದ್ದು ಗೋಡೆಗಳು ಹಾನಿಯಾಗಿವೆ.
ಯದ್ದಲದೊಡ್ಡಿ ಗ್ರಾಮದ ನಿವಾಸಿಗಳಾದ ರಾಜಶೇಖರೆಡ್ಡಿ, ಗುರ್ರಪ್ಪ ಮೂಡಲಗಿರಿ, ಡಾ.ಕರಿಬಸ್ಸಪ್ಪ, ರಮೇಶ್ ಮತ್ತು ಚನ್ನಬಸವ ಅವರ ಮನೆಗಳಲ್ಲಿ 20 ಅಡಿ ಆಳದವರೆಗೆ ಮಣ್ಣು ಕುಸಿದು ಬೇಸ್ಮೆಂಟ್ (ನರಲಹಾಸು) ಹಾಳಾಗಿದ್ದು, ಮನೆಯಲ್ಲಿ ಎಲ್ಲೆಂದರಲ್ಲಿ ಗುಂಡಿಗಳು ಕಾಣಿಸಿಕೊಂಡಿವೆ. ಗೋಡೆಗಳಿಗೂ ಹಾನಿಯಾಗಿದ್ದು, ಕುಟುಂಬಗಳು ಭದ್ರತೆ ಬಗ್ಗೆ ಆತಂಕದಲ್ಲಿವೆ.
ಯದ್ದಲದೊಡ್ಡಿ ತಗ್ಗು ಪ್ರದೇಶವಾಗಿದ್ದು, ಸುತ್ತಮುತ್ತಲಿನ ನೀರಾವರಿ ಪ್ರದೇಶಗಳು ಮತ್ತು ನಾಲೆಗಳು ನೀರಿನಿಂದ ತುಂಬಿರುವುದರಿಂದ, ನೀರು ನೆಲಕ್ಕೆ ಇಂಗಿ ಮಣ್ಣು ದುರ್ಬಲವಾಗಿ ಈ ರೀತಿ ಕುಸಿತವಾಗಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ.
ಮನೆಗಳಲ್ಲಿ 20 ಅಡಿ ಆಳದವರೆಗೆ ಮಣ್ಣು ಕುಸಿದಿದ್ದು ಮನೆಯ ಮಾಲಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.







