ರಾಯಚೂರು | ಡಿ.ರಾಂಪೂರು ಗ್ರಾಮದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ : ಕರುವಿನ ಮೇಲೆ ದಾಳಿ

ರಾಯಚೂರು: ರಾಯಚೂರು ತಾಲೂಕಿನ ಡಿ.ರಾಂಪೂರು ಬಳಿಯ ನಾಗರ್ಶಿ ಕ್ಯಾಂಪ್ ನಲ್ಲಿ ಚಿರತೆ ಕಾಣಿಸಿಕೊಂಡಿದ್ದು, ಒಂದುವರೆ ವರ್ಷದ ಕರುವಿನ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ.
ಕಳೆದ ಮೂರು ದಿನಗಳಿಂದ ಡಿ.ರಾಂಪೂರು (ಡೊಂಗರಾಂಪೂರು) ಗ್ರಾಮದ ಪರಮೇಶ್ವರ ಬೆಟ್ಟ ಹಾಗೂ ನಾಗರ್ಶಿ ಕ್ಯಾಂಪ್ ಗುಡ್ಡದ ಬಳಿ ಚಿರತೆ ಓಡಾಡುತ್ತಿದೆ. ಗುರುವಾರ ರಾತ್ರಿ ನಾಗರ್ಶಿ ಕ್ಯಾಂಪ್ ಬಳಿಯ ಹೊಲದಲ್ಲಿ ಕಟ್ಟಿದ ಆಕಳ ಕರುವಿನ ಮೇಲೆ ದಾಳಿ ಮಾಡಿ ಕೊಂದು ಹಾಕಿದೆ ಎಂದು ತಿಳಿದು ಬಂದಿದೆ.
ಆ. 19 ರಂದು ದೇವದುರ್ಗ ತಾಲೂಕಿನ ಜಾಲಹಳ್ಳಿ ಹೋಬಳಿಯ ಬಸ್ಸಾಪೂರು ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷವಾಗಿ ನಾಯಿ, ಕಾಡು ಪ್ರಾಣಿಗಳನ್ನು ತಿಂದಿತ್ತು. ಇದರ ಬಗ್ಗೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದಾಗ ಬಲೆ ಬೀಸಿದರೂ ಬೋನಿಗೆ ಬಿದ್ದಿಲ್ಲ. ಈಗ ಅದೇ ಚಿರತೆ ಡಿ.ರಾಂಪೂರು ಗ್ರಾಮಕ್ಕೆ ಬಂದಿದೆ ಎಂದು ಅರಣ್ಯ ಇಲಾಖೆಯ ಅಧಿಕಾರಿಗಳು ಅನುಮಾನ ವ್ಯಕ್ತಪಡಿಸಿದ್ದಾರೆ.
Next Story





