ರಾಯಚೂರು | ಕಲ್ಲೂರು ಬಳಿ ರಸ್ತೆ ಅಪಘಾತ ವ್ಯಕ್ತಿ ಮೃತ್ಯು

ರಾಯಚೂರು : ಸಿರವಾರ ತಾಲೂಕಿನ ಕಲ್ಲೂರು ಬಳಿ ಕಾರು ಮತ್ತು ದ್ವಿಚಕ್ರ ವಾಹನ ಡಿಕ್ಕಿಯಾಗಿ ದ್ವಿಚಕ್ರ ವಾಹನದ ಹಿಂಬದಿ ಸವಾರ ಮೃತಪಟ್ಟಿರುವ ಘಟನೆ ಶನಿವಾರ ರಾತ್ರಿ ನಡೆದಿದೆ.
ಸಿಂಧನೂರು ತಾಲ್ಲೂಕಿನ ಚಿರತನಾಳ ಗ್ರಾಮದ ನಿವಾಸಿ ನಿಂಗಪ್ಪ (57) ಮೃತಪಟ್ಟರೆ, ದ್ವಿಚಕ್ರ ವಾಹನ ಚಾಲಕ ಯಮುನಪ್ಪನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆಗಾಗಿ ರಾಯಚೂರು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





