ರಾಯಚೂರು | ಮಾರಕಾಸ್ತ್ರದಿಂದ ಕಡಿದು ವ್ಯಕ್ತಿಯ ಹತ್ಯೆ; ಸ್ಥಳಕ್ಕೆ ಪೊಲೀಸ್ ಶ್ವಾನದಳದ ತಂಡ ಭೇಟಿ

ರಾಯಚೂರು :ಮಾರಕಾಸ್ತ್ರದಿಂದ ಕಡಿದು ಕೊಚ್ಚಿ ವ್ಯಕ್ತಿಯೊರ್ವನನ್ನು ಹತ್ಯೆ ಮಾಡಿರುವ ಘಟನೆ ಹಿರೇ ಉಪ್ಪೇರಿ ಸೀಮಾದ ಜಮೀನೊಂದರಲ್ಲಿ ಬುಧವಾರ ರಾತ್ರಿ ನಡೆದಿದೆ.
ಮೃತರನ್ನು ಲಿಂಗಸುಗೂರು ತಾಲೂಕಿನ ಯರಗುಂಟಿ ಗ್ರಾಮದ ನಿವಾಸಿ ಬಸನಗೌಡ ( 42) ಎಂದು ಗುರುತಿಸಲಾಗಿದೆ.
ಹತ್ಯೆ ನಡೆಸಿದ ಆರೋಪಿಗಳು ಬಸನಗೌಡರ ದ್ವಿಚಕ್ರ ವಾಹನವನ್ನು ಕಾಲುವೆಗೆ ಹಾಕಿದ್ದು, ಸ್ಥಳಕ್ಕೆ ಡಿವೈಎಸ್ಪಿ ದತ್ತಾತ್ರೇಯ ಕಾರ್ನಾಡ್, ಪಿಐ ಪುಂಡಲೀಕ ಪಟ್ಟಾತಾರ್ ಹಾಗೂ ಶ್ವಾನ ದಳದ ತಂಡದವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಲಿಂಗಸುಗೂರು ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ ಎಂದು ತಿಳಿದು ಬಂದಿದೆ.
Next Story





