ರಾಯಚೂರು | ಗಾಂಜಾ ಮಾರಾಟ : ನಾಲ್ವರು ಆರೋಪಿಗಳ ಬಂಧನ ; 5.12 ಲಕ್ಷ ಮೌಲ್ಯದ ಗಾಂಜಾ ವಶ

ರಾಯಚೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ ಸಿಂಧನೂರು ಪೊಲೀಸರು, 5.12 ಲಕ್ಷ ಮೌಲ್ಯದ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಸಿಂಧನೂರು ತಾಲೂಕಿನ ಆರ್.ಎಚ್ ಕ್ಯಾಂಪ್ ನಿವಾಸಿ ಹನುಮೇಶ ಸರ್ಕಾರ್ ನಮಶೂದ್ರ, ಸ್ವಾಗತ್ ಸರ್ಕಾರ್, ಮಣಿಶಂಕರ ಸರ್ಕಾರ್, ಶಿವಕುಮಾರ ಮಂಡಲ್ ಬಂಧಿತ ಆರೋಪಿಗಳು.
ಬಂಧಿತರಿಂದ 5.12 ಲಕ್ಷ ಮೌಲ್ಯದ ಒಟ್ಟು 5 ಕೆಜಿ 210 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಿಸಲಾಗಿದೆ.
ಎಸ್‍ಪಿ ಅರುಣಾಂಗ್ಷುಗಿರಿ, ಎಎಸ್‍ಪಿಗಳಾದ ಕುಮಾರ ಸ್ವಾಮಿ, ಜಿ.ಹರೀಶ, ಸಿಂಧನೂರು ಡಿವೈಎಸ್ಪಿ ಜಿ ಚಂದ್ರಶೇಖರ ಅವರ ಮಾರ್ಗದರ್ಶನದಲ್ಲಿ ಗ್ರಾಮೀಣ ಠಾಣೆಯ ಸಿಪಿಐ ವಿನಾಯಕ ನೇತೃತ್ವದಲ್ಲಿ ಸಿಬ್ಬಂದಿಗಳಾದ ದೇವರೆಡ್ಡಿ, ಮಹೇಶ, ಶಂಕರ ಕುಲಕರ್ಣಿ, ಅಫಿಜುಲ್ಲಾ, ತಿಪ್ಪಣ್ಣ, ಅಮರೇಶಗೌಡ, ಅಯ್ಯಮ್ಮ ಅವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
Next Story




