ರಾಯಚೂರು: ಹವಾಮಾನ ವೈಪರೀತ್ಯ ಹಿನ್ನೆಲೆ; ಸಚಿವರು, ರಾಜ್ಯಪಾಲರ ಕಾರ್ಯಕ್ರಮ ರದ್ದು

ರಾಯಚೂರು: ಹವಾಮಾನ ವೈಪರೀತ್ಯ ಹಿನ್ನೆಲೆಯಲ್ಲಿ ರಾಜ್ಯಪಾಲ ಹಾಗೂ ಕೃಷಿ ಸಚಿವರ ಹೆಲಿಕಾಪ್ಟರ್ ಇಳಿಯಲು ಅನಾನುಕೂಲತೆ ಉಂಟಾದ ಕಾರಣದಿಂದ ಕೃಷಿ ವಿವಿಯಲ್ಲಿ ಆಯೋಜಿಸಲಾಗಿದ್ದ 14 ನೇ ಘಟಿಕೋತ್ಸವಕ್ಕೆ ಗೈರಾಗಿದ್ದಾರೆ.
ಬೆಳಿಗ್ಗೆ 11 ಗಂಟೆಗೆ ವಿವಿ ಸಭಾಂಗಣದಲ್ಲಿ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ ಬೆಂಗಳೂರಿನಿಂದ ನಿರ್ಗಮಿಸಿದ ಉಭಯ ಗಣ್ಯರ ಹೆಲಿಕಾಪ್ಟರ್ ಜಿಂದಾಲ್ ವಿಮಾನ ನಿಲ್ದಾಣದಿಂದ ವಾಪಸ್ ಬೆಂಗಳೂರಿನತ್ತ ಮರಳಿದೆ ಎಂಬ ಮಾಹಿತಿ ಲಭ್ಯವಾಗಿದೆ. ಬಳಿಕ ಆನ್ ಲೈನ್ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ವಿವಿಯ ಕುಲಪತಿ ಹಾಗೂ ಅಧಿಕಾರಿಗಳು ಕಾರ್ಯಕ್ರಮ ನೆರವೇರಿಸಿದರು.
Next Story







