ರಾಯಚೂರು | ನಿಲ್ಲಿಸಿದ್ದ ಎರಡು ಬೈಕ್ ಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿ : ಪ್ರಕರಣ ದಾಖಲು

ರಾಯಚೂರು: ದುಷ್ಕರ್ಮಿಯೊರ್ವ ನಿಲ್ಲಿಸಿದ್ದ ಎರಡು ಬೈಕ್ ಗಳಿಗೆ ಬೆಂಕಿ ಹಚ್ಚಿದ ಘಟನೆ ಲಾಲ್ ಬಹದ್ದೂರ್ ಶಾಸ್ತ್ರಿ ನಗರದ ಅಲಿ ಕಾಲೋನಿಯ ಮಕ್ಕಾ ಮಸೀದಿ ಬಳಿ ಶುಕ್ರವಾರ ರಾತ್ರಿ 11.50ರ ಸುಮಾರಿಗೆ ನಡೆದಿದೆ.
ಬಡಾವಣೆಯ ನಿವಾಸಿಗಳಾದ ಲಾತಿಫ್ ಅಹ್ಮದ್ ಮತ್ತು ಶಬ್ಬೀರ್ ಅಹ್ಮದ್ ಅವರು ನಿಲ್ಲಿಸಿದ್ದ ಶೈನ್ ಹೊಂಡಾ ಆಕ್ಟಿವಾ ಬೈಕ್ ಗಳಿಗೆ ಬೆಂಕಿ ಹಚ್ಚಲಾಗಿದ್ದು, ಬೆಂಕಿ ಹಚ್ಚುವ ದೃಶ್ಯಗಳು ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬೈಕ್ ಮಾಲಕರು ನೀಡಿದ ದೂರಿನ ಮೇರೆಗೆ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ರಾತ್ರಿಯೇ ಸ್ಥಳಕ್ಕೆ ತೆರಳಿ ಪರಿಶೀಲಿಸಿ ಕ್ರಮಕ್ಕೆ ಮುಂದಾಗಿದ್ದಾರೆ.
Next Story





