ರಾಯಚೂರು | ವ್ಯಕ್ತಿ ಕಾಣೆ: ಪತ್ತೆಗೆ ಮನವಿ

ರಾಯಚೂರು : ಇಲ್ಲಿನ ಪಶ್ಚಿಮ ಪೊಲೀಸ್ ಠಾಣೆ ವ್ಯಾಪ್ತಿಯ ಅಸ್ಕಿಹಾಳ ನಿವಾಸಿ ಆಂಜನೇಯ (62) ಅವರು ಸೆ.14ರ ಮಧ್ಯಾಹ್ನ 12.30ಕ್ಕೆ ಮನೆಯಲ್ಲಿ ಊಟ ಮಾಡಿ ಹೊರಗೆ ಹೋದವನ್ನು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ಈ ಕುರಿತು ಠಾಣಾ ಅಪರಾಧ ಸಂಖ್ಯೆ: 128/2025 ಕಲಂ ಮನುಷ್ಯ ಕಾಣೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ವ್ಯಕ್ತಿಯ ಚಹರೆ: ಕಾಣೆಯಾದ ಆಂಜನೇಯ ಅವರು 5.6 ಎತ್ತರ, ತೆಳ್ಳನೆಯ ಮೈಕಟ್ಟು, ಗೋಧಿ ಮೈಬಣ್ಣ, ಉದ್ದನೆಯ ಮುಖ, ತಲೆಯಲ್ಲಿ ಕಪ್ಪು ಕೂದಲು ಹೊಂದಿದ್ದು, ಬಿಳಿ ಪಂಚೆ, ಬಿಳಿ ಜುಬ್ಬ ಹಾಗೂ ಹಸಿರು ಟಾವೆಲ್ ಬಟ್ಟೆಗಳನ್ನು ಧರಿಸಿರುತ್ತಾರೆ. ಕನ್ನಡ, ತೆಲುಗು, ಇಂಗ್ಲೀಷ್ ಹಾಗೂ ಹಿಂದಿ ಭಾಷೆ ಮಾತನಾಡುತ್ತಾರೆ.
ಈ ವ್ಯಕ್ತಿಯ ಬಗ್ಗೆ ಸುಳಿವು ಕಂಡುಬಂದಲ್ಲಿ ಪಶ್ಚಿಮ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 08532-232570, ಪಿ.ಎಸ್.ಐ ಮೊಬೈಲ್ ಸಂಖ್ಯೆ: 9480803847, ಪಶ್ಚಿಮ ವೃತ್ತ ಸಿ.ಪಿ.ಐ ಮೊಬೈಲ್ ಸಂಖ್ಯೆ: 9480803831, ಜಿಲ್ಲಾ ನಿಸ್ತಂತು ಘಟಕ ರಾಯಚೂರು ದೂರವಾಣಿ ಸಂಖ್ಯೆ: 08532-235635, 9480803800ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಪಶ್ಚಿಮ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





