ರಾಯಚೂರು | ಯುವಕ ಕಾಣೆ : ಪತ್ತೆಗೆ ಪೊಲೀಸರ ಮನವಿ

ರಾಯಚೂರು : ಇಲ್ಲಿನ ಪಶ್ಚಿಮ ವೃತ್ತದ ಪೊಲೀಸ್ ಠಾಣೆಯ ವ್ಯಾಪ್ತಿಯ ಎಸ್ಸಿ/ಎಸ್ ಲೇಔಟಿನ ನಿವಾಸಿಯಾದ ಪಾಗುಂಟಸ್ವಾಮಿ ಎಂಬ ಯುವಕ 2011ರ ಅಕ್ಟೋಬರ್ 14ರಂದು ಮನೆಯಿಂದ ಡ್ರೈವರ್ ಕೆಲಸಕ್ಕೆ ಅಂತಾ ಹೇಳಿ ಹೋದವವನು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ಈ ಕುರಿತು ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಣೆಯಾದ ಯುವಕ 159 ಸೆ.ಮಿ ಎತ್ತರ, ಸಾದಾರಣ ಮೈಕಟ್ಟು, ಗೋದಿ ಬಣ್ಣ, ದುಂಡು ಮುಖ, ಬಲಗಡೆ ಹಣೆಯ ಮೇಲೆ ಸುಳಿ, ಹಳೆ ಗಾಯದ ಕಲೆ ಮತ್ತು ಬಲಗೈ ಮೇಲೆ ಪಿವಿಎ ಅಂತಾ ಇಂಗ್ಲೀಷ್ ಅಕ್ಷರದ ಹಚ್ಚೆ ಇರುತ್ತದೆ. ಪಿಂಕ್ ಕಲರ್ ಶರ್ಟ್, ಬೂದು ಬಣ್ಣದ ಪ್ಯಾಂಟ್ ಧರಿಸಿದ್ದು, ಕನ್ನಡ, ತೆಲುಗು ಹಾಗೂ ಹಿಂದಿ ಭಾಷೆ ಮಾತನಾಡುತ್ತಾನೆ.
ಈ ಯುವಕನ ಬಗೆ ಸುಳಿವು ಸಿಕ್ಕಲ್ಲಿ ದೂರವಾಣಿ ಸಂಖ್ಯೆ: 08532-232570, 9480803847, 9480803831, 9480803800ಗೆ ಸಂಪರ್ಕಿಸುವಂತೆ ಪಶ್ಚಿಮ ವೃತ್ತದ ಪೊಲೀಸ್ ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story







