ರಾಯಚೂರು | ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಶಾಸಕರು, ಅಧಿಕಾರಿಗಳು ಗೈರು ; ಅಶೋಕ ಜೈನ್ ಖಂಡನೆ

ರಾಯಚೂರು : ಮಾ.6 ರಂದು ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷತೆ ವಹಿಸಬೇಕಿದ್ದ ಸ್ಥಳೀಯ ಶಾಸಕ ಡಾ.ಶಿವರಾಜ ಪಾಟೀಲ್ ಸೇರಿದಂತೆ ಜಿಲ್ಲಾಧಿಕಾರಿ, ಸರ್ಕಾರ ಉನ್ನತ ಅಧಿಕಾರಿಗಳು ಗೈರಾಗುವ ಮೂಲಕ ಕನ್ನಡಕ್ಕೆ ಅವಮಾನ ಮಾಡಿದ್ದಾರೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್.ಶಿವರಾಮೇಗೌಡ ಬಣದ ರಾಜ್ಯ ಸಂಘಟನಾ ಕಾರ್ಯದರ್ಶಿ ಹಾಗೂ ಜಿಲ್ಲಾಧ್ಯಕ್ಷ ಅಶೋಕ ಕುಮಾರ ಜೈನ್ ಆರೋಪಿಸಿದರು.
ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಯಚೂರಿನ ರಂಗಮಂದಿರದಲ್ಲಿ ಮಾ.6ಕ್ಕೆ ಅದ್ದೂರಿಯಾಗಿ ನಡೆದ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಅಧಿಕಾರಿಗಳಿಗೆ ಆಹ್ವಾನ ಪತ್ರಿಕೆಯಲ್ಲಿ ಗೌರವಿಸಿ ಆಹ್ವಾನಿಸಿದರೂ, ಈ ಸಮ್ಮೇಳನಕ್ಕೆ ಆಗಮಿಸದ್ದು ಅತೀ ಖೇದಕರ ಸಂಗತಿ. ಜಿಲ್ಲಾಧಿಕಾರಿಗಳು, ಜಿಲ್ಲಾ ಹೆಚ್ಚುವರಿ ಅಧಿಕಾರಿಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು , ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ,ತಹಶೀಲ್ದಾರರು ,ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯ ಸಹಾಯಕ ನಿರ್ದೇಶಕರು ಮುಂತಾದವರೆಲ್ಲ ಅನುಪಸ್ಥಿತಿ ಕನ್ನಡಕ್ಕೆ ಅಗೌರವದ ತಾತ್ಸಾರ ಮನೋಭಾವನೆ ತೋರಿದ್ದನ್ನು ಖಂಡಿಸಿದರು.
ಬಹುಶಃ ನಮ್ಮನ್ನು ಯಾರು ಕೇಳುವುದಿಲ್ಲ ಎನ್ನುವ ಮನೋಭಾವನೆ ತಮ್ಮದಾಗಿರಬಹುದೆಂದು ಸಂಘಟನೆಯು ಆಲೋಚಿಸುತ್ತಾ ಮಾಧ್ಯಮ ಗೋಷ್ಠಿ ಮಾಡುತ್ತಿದೆ. ಕನ್ನಡಕ್ಕೆ ಅನ್ಯಾಯವಾದರೆ ಶಿವರಾಮೇಗೌಡ ಕರವೇ ಸಂಘಟನೆಗೆ ಅರಗಿಸಲಾರದ ಸಂಗತಿ.
ಇನ್ನು ನನ್ನ ಸಹಪಾಠಿಗಳಾದ ಕನ್ನಡಪರ ಸಂಘಟನೆಗಳಿಗೆ ನಾನು ಒಬ್ಬ ಕನ್ನಡಪರ ಸಂಘಟನೆಯ ಅಧ್ಯಕ್ಷನಾಗಿ ತಮಗೆ ಕೈ ಮುಗಿದು ಕೇಳಿಕೊಳ್ಳುವುದೇನೆಂದರೆ, ನೀವು ಕೂಡ ಕನ್ನಡದ ಕೆಲಸಕ್ಕೆ ಮುನ್ನುಗ್ಗಬೇಕು. ಎಲ್ಲರ ಜೊತೆ ಬೆರೆಯಬೇಕು. ಆಗ ತಾನಾಗಿಯೇ ಸಾಹಿತ್ಯ ಪರಿಷತ್ತು ನಿಮ್ಮನ್ನು ಗಮನಿಸಿ ಗೌರವಿಸುತ್ತದೆ. ರಾಯಚೂರು ತಾಲೂಕಿನ 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಗೆ ಎಲ್ಲಾ ಸಂಘ ಸಂಸ್ಥೆಗಳಿಗೆ ಎರಡು ಭಾರಿ ಪತ್ರಿಕೆಯಲ್ಲಿ ಸಭೆಗೆ ಬರಲು ಪ್ರಕಟಿಸಲಾಗಿತ್ತು. ಆದರೂ ತಾವು ಬಹುಶಃ ಪತ್ರಿಕೆಯನ್ನು ಗಮನಿಸಿ ಬಾರದಿದ್ದದ್ದು ನನಗೂ ನೋವಿನ ಸಂಗತಿ ಎಂದರು.
ನಾನು ಉನ್ನತ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಶಹಬ್ಬಾಸ್ ಗಿರಿ ಪಡೆಯಲು ಖಂಡಿಸುತ್ತಿಲ್ಲ. ನೋವಿನಿಂದ ಗಡಿ ಭಾಗವಾದ ರಾಯಚೂರು ಜಿಲ್ಲೆಯಲ್ಲಿ ಕನ್ನಡಕ್ಕೆ ಅಗೌರವ ಆಗಬಾರದೆಂದು ಕಳಕಳಿಯಿಂದ ಖಂಡಿಸಿರುವೆ ಎಂದರು.
ಈ ಸಂದರ್ಭದಲ್ಲಿ ಆಸೀಫ್ ರಾಯಚೂರು ನಗರಾಧ್ಯಕ್ಷರು, ಕೆ.ಕಿಶನ್‌ರಾವ್, ಜಿಲ್ಲಾ ಖಜಾಂಚಿ ಮೊಹಮ್ಮದ್ ಅಜೀಜ್, ತಾಲೂಕು ಉಪಾಧ್ಯಕ್ಷರು ರಮೇಶರಾವ್, ಕಲ್ಲೂರಕರ್ ತಾಲೂಕ ಉಪಾಧ್ಯಕ್ಷ ವೀರಭದ್ರಯ್ಯ ಸ್ವಾಮಿ, ನಗರ ಉಪಾಧ್ಯಕ್ಷ ಮಹೇಂದ್ರಸಿಂಗ್, ನಗರ ಉಪಾಧ್ಯಕ್ಷ ಮುಹಮ್ಮದ್ ಆಸೀಫ್ ಉಪಸ್ಥಿತರಿದ್ದರು.







