ರಾಯಚೂರು | ಮುಂಗಾರು ಬೆಳ್ಳಿ ಹಬ್ಬ; ಎತ್ತುಗಳಿಂದ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ ಬಳ್ಳಾರಿ ಜಿಲ್ಲೆಗೆ ಪ್ರಥಮ ಸ್ಥಾನ

ರಾಯಚೂರು: ಮುನ್ನೂರುಕಾಪು ಸಮಾಜದಿಂದ ನಗರದ ರಾಜೇಂದ್ರ ಗಂಜ್ ಆವರಣದಲ್ಲಿ ಆಯೋಜಿಸಿದ 'ಮುಂಗಾರು ಸಾಂಸ್ಕೃತಿಕ ರಾಯಚೂರು ಬೆಳ್ಳಿ ಹಬ್ಬ'ದಲ್ಲಿ ಮಂಗಳವಾರ ಮೊದಲನೇ ದಿನದ ಒಂದು ಟನ್ ಭಾರವಾದ ಕಲ್ಲು ಎಳೆಯುವ ಸ್ಪರ್ಧೆಯಲ್ಲಿ 3,600 ಅಡಿ ದೂರ ಎಳೆದ ಬಳ್ಳಾರಿ ಜಿಲ್ಲೆಯ ಆಂದ್ರೊಳ ಗ್ರಾಮದ ಆನಂದರೆಡ್ಡಿ ಅವರ ಎತ್ತುಗಳು ಪ್ರಥಮ ಸ್ಥಾನ ಪಡೆದು ಗಮನ ಸೆಳೆಯಿತು.
3,456 ಅಡಿ ಭಾರ ಎಳೆದ ದೇವದುರ್ಗ ತಾಲೂಕಿನ ಮಾರಪಳ್ಳಿ ಗ್ರಾಮದ ರವಿಗೌಡ ಅವರ ಎತ್ತುಗಳ ದ್ವಿತೀಯ ಸ್ಥಾನ ಪಡೆದವು. 55 ಸಾವಿರ ರೂ. ನಗದು ಹಾಗೂ ದ್ವಿತೀಯ ಬಹುಮಾನ ನೀಡಲಾಯಿತು. 3,300 ಅಡಿ ದೂರ ಎಳೆದ ದೇವದುರ್ಗ ತಾಲೂಕಿನ ರಾಮದುರ್ಗ ಗ್ರಾಮದ ತಿಪ್ಪಯ್ಯ ನಾಯಕರ ಎತ್ತುಗಳಿಗೆ ತೃತೀಯ ಸ್ಥಾನ ಪಡೆದವು. ಎತ್ತುಗಳ ಮಾಲೀಕರಿಗೆ 45 ಸಾವಿರ ರೂ. ನಗದು ಹಾಗೂ ಬಹುಮಾನ ನೀಡಲಾಯಿತು. 3,163, ಅಡಿ ಭಾರ ಎಳೆದ ದೇವದುರ್ಗ ತಾಲೂಕಿನ ಇರಬಗೇರಾ ಗ್ರಾಮದ ಮಹಾಂತೇಶ ಎತ್ತುಗಳಿಗೆ 35 ಸಾವಿರ ರೂ. ನಗದು ಹಾಗೂ ನಾಲ್ಕನೇ ಬಹುಮಾನ ಪಡೆದುಕೊಂಡಿದೆ. 3,048 ಅಡಿ ದೂರ ಎಳೆದ ದೇವದುರ್ಗ ತಾಲೂಕಿನ ಮಾರ್ಪಳ್ಳಿ ಗ್ರಾಮದ ಬಸವಗೌಡರ ಎತ್ತುಗಳಿಗೆ 30 ಸಾವಿರ ರೂ. ನಗದು ಹಾಗೂ ಐದನೇ ಬಹುಮಾನ, 2,903 ಅಡಿ ದೂರ ಎಳೆದ ತಾಲೂಕಿನ ಪಲಕಂದೊಡ್ಡಿ ಗ್ರಾಮದ ಖಾಜಾ ಹುಸೇನ್ ಎತ್ತುಗಳಿಗೆ ಆರನೇ ಬಹುಮಾನ ಹಾಗೂ 2,565 ದೂರ ಎಳೆದ ದೇವದುರ್ಗ ತಾಲೂಕಿನ ಇರಬಗೇರಾ ಗ್ರಾಮದ ರಂಗಪ್ಪ ನಾಯಕರ ಎತ್ತುಗಳು ಏಳನೇ ಬಹುಮಾನ ಪಡೆದವು.
ನಗರದ ರಾಜೇಂದ್ರ ಗಂಜ್ ಆವರಣದಲ್ಲಿ ನಡೆದ ಎತ್ತುಗಳ ಸ್ಪರ್ಧೆಗೆ ವಿವಿಧ ಜಿಲ್ಲೆಗಳಿಂದ 11 ಜೋಡಿಗಳು ಪಾಲ್ಗೊಂಡಿದ್ದವು. ಮೊದಲ ದಿನ ಕರ್ನಾಟಕ ರಾಜ್ಯದ ಎತ್ತುಗಳಿಂದ ಭಾರದ ಕಲ್ಲು ಎಳೆಯುವ ಸ್ಪರ್ಧೆ ನಡೆಯಿತು. ವಿಜಯಪುರ, ಬಳ್ಳಾರಿ, ಯಾದಗಿರಿ, ರಾಯಚೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಒಟ್ಟು 11 ಜೋಡಿ ಎತ್ತುಗಳು ಸ್ಪರ್ಧೆಯಲ್ಲಿ ಜಿಲ್ಲೆಗಳಿಂದ ಭಾರೀ ಗಾತ್ರದ ಎತ್ತುಗಳು ಭಾಗವಹಿಸಿದ್ದವು.
ವೀಕ್ಷಕರು ಮೈದಾನದ ಸುತ್ತಮುತ್ತ ಕಿಕ್ಕಿರಿದು ನಿಂತಿದ್ದರು. ಅಂಗಡಿ ಮುಂಗಟ್ಟುಗಳ ಮೇಲೆ ಕುಳಿತು ಪಂದ್ಯ ವೀಕ್ಷಿಸಿದರು. ಎತ್ತುಗಳು 20 ನಿಮಿಷದಲ್ಲಿ ಅತಿ ಹೆಚ್ಚು ದೂರ ಕಲ್ಲು ಎಳೆಯುವ ಮೂಲಕ ಶಕ್ತಿ ಪ್ರದರ್ಶನ ಮಾಡಿದವು. ಅತಿ ಹೆಚ್ಚು ದೂರ ಎಳೆದ ಎತ್ತುಗಳಿಗೆ ಪ್ರಥಮ, ದ್ವಿತೀಯ, ತೃತೀಯ ಹಾಗೂ ಇತರೆ ಬಹುಮಾನ ಘೋಷಿಸಲಾಯಿತು.
ಸ್ಪರ್ಧೆಯಲ್ಲಿ ವಿಜೇತ ಎತ್ತುಗಳಿಗೆ ಹಬ್ಬದ ರೂವಾರಿ ಮಾಜಿ ಶಾಸಕ ಪಾಪಾರೆಡ್ಡಿ ನಗದು ಬಹುಮಾನ ವಿತರಿಸಿದರು. ಮುನ್ನೂರು ಕಾಪು ಸಮಾಜದ ಮುಖಂಡರು ಹಾಗೂ ಯುವಕರು ಪಾಲ್ಗೊಂಡಿದ್ದರು.