ರಾಯಚೂರು | ಚತುಷ್ಪಥ ರಸ್ತೆ ಕಾಮಗಾರಿ ವೀಕ್ಷಿಸಿದ ಸಂಸದ ಜಿ ಕುಮಾರ ನಾಯಕ

ರಾಯಚೂರು: ಕಲ್ಮಾಲ ಜಂಕ್ಷನ್‌ನಿಂದ ಸಿಂಧನೂರುವರೆಗೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ ನಿಯಮಿತ (ಕೆಆರ್‌ಡಿಸಿಎಲ್) ವತಿಯಿಂದ ನಿರ್ಮಾಣವಾಗುತ್ತಿರುವ ಚತುಷ್ಪಥ ರಸ್ತೆ ಕಾಮಗಾರಿಯನ್ನು ರಾಯಚೂರು ಸಂಸದ ಜಿ ಕುಮಾರ ನಾಯಕ ಅವರು ಪರಿಶೀಲಿಸಿದರು.
ಮಾನವಿ ಸಮೀಪದ ಕಪಗಲ್ KRDCL ಕ್ಯಾಂಪ್‌ಗೆ ಭೇಟಿ ನೀಡಿ ಪ್ರಯೋಗಾಲಯವನ್ನು ವೀಕ್ಷಣೆ ಮಾಡಿದ ಸಂಸದರು ರಸ್ತೆಗೆ ಬಳಸುವ ಸಾಮಾಗ್ರಿಗಳ ಗುಣಮಟ್ಟವನ್ನು ಪರೀಕ್ಷಿಸಿದ ಬಳಿಕ ಕಾಮಗಾರಿ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ KRDCL ಕಾರ್ಯನಿರ್ವಾಹಕ ಎಂಜಿನಿಯರ್ ಮುರಳೀಧರ್ ಟಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಮಂಜುನಾಥ್, ಸಹಾಯಕ ಎಂಜಿನಿಯರ್ ವಿನೋದ್, ಅಶೋಕ್ ಮಾನೆ, ಎಂಜಿನಿಯರ್ ಅತುಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Next Story





