ರಾಯಚೂರು | ಕ್ರಿಕೆಟ್ ಪಂದ್ಯಾಟಕ್ಕೆ ಮಾಜಿ ಶಾಸಕ ಪಾಪಾರೆಡ್ಡಿ ಚಾಲನೆ

ರಾಯಚೂರು : ಕ್ರೀಡೆಗಳಲ್ಲಿ ಸೋಲು ಗೆಲುವು ಸಾಮಾನ್ಯ, ಕ್ರೀಡಾಪಟುಗಳು ಎರಡನ್ನೂ ಸಮನಾಗಿ ಸ್ವೀಕರಿಸಬೇಕು ಎಂದು ಪಂದ್ಯಾಟದ ಆಯೋಜಕ, ಮಾಜಿ ಶಾಸಕ ಎ.ಪಾಪಾರೆಡ್ಡಿ ತಿಳಿಸಿದ್ದಾರೆ.
ನಗರದ ರಾಜೇಂದ್ರ ಗಂಜಿನಲ್ಲಿರುವ ರೈತ ಭವನದ ಹತ್ತಿರವಿರುವ ಮೈದಾನದಲ್ಲಿ ಮುಂಗಾರು ಸಾಂಸ್ಕೃತಿಕ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಜಿ.ಶೇಖರರೆಡ್ಡಿ, ಗುಡ್ಸಿ ಪ್ರತಾಪ ರೆಡ್ಡಿ, ಪೋಗುಲ್ ಶ್ರೀನಿವಾಸ್ ರೆಡ್ಡಿ, ನರಸರೆಡ್ಡಿ, ಶ್ರೀನಿವಾಸರೆಡ್ಡಿ, ಜಿ.ಮಹೇಂದ್ರ ರೆಡ್ಡಿ, ಎನ್.ಭೀಮರೆಡ್ಡಿ, ರಾಜಕುಮಾರ, ಕೇಶವರೆಡ್ಡಿ, ಮುನ್ನೂರ ಕಾಪು ಸಮಾಜದ ಪದಾಧಿಕಾರಿಗಳು, ಮುಖಂಡರು, ಹಿರಿಯರು, ಯುವಕರು ಉಪಸ್ಥಿತರಿದ್ದರು.
Next Story





