ರಾಯಚೂರು | ಪಾನ್ ಶಾಪ್‌ನ ಬೀಗ ಮುರಿದು ಕಳ್ಳತನ

ರಾಯಚೂರು: ನಗರ ಬಸ್ ನಿಲ್ದಾಣದ ಸಮೀಪ ಗಾಲಿಬ್ ನಗರಕ್ಕೆ ತೆರಳುವ ರಸ್ತೆಯಲ್ಲಿರುವ ಪಾನ್ ಶಾಪ್‌ನಲ್ಲಿ ಕಳ್ಳತನ ನಡೆದ ಘಟನೆ ಮಂಗಳವಾರ ತಡರಾತ್ರಿ ಬೆಳಕಿಗೆ ಬಂದಿದೆ.
ವಲಿ ಅಹಮ್ಮದ್ ಎಂಬುವವರ ತಳ್ಳುಬಂಡಿಯ ಪಾನ್ ಶಾಪ್ ನಲ್ಲಿ ಕಳ್ಳರು ಬೀಗ ಮುರಿದು ಒಳನುಗ್ಗಿ, 10 ಸಾವಿರ ರೂ. ನಗದು ಮತ್ತು ಸುಮಾರು 20 ಸಾವಿರ ರೂ. ಮೌಲ್ಯದ ಸಿಗರೇಟ್‌ಗಳು ಸೇರಿದಂತೆ ಹಲವು ವಸ್ತುಗಳನ್ನು ಕಳವು ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಸದರ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಇದೇ ಪಾನ್ ಶಾಪ್‌ನಲ್ಲಿ ಇದು ಎರಡನೇ ಬಾರಿ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.
Next Story





