ರಾಯಚೂರು | ಆರೆಸ್ಸೆಸ್ ಪಥ ಸಂಚಲನದಲ್ಲಿ ಪಿಡಿಒ ಭಾಗಿ : ಭೀಮ್ ಆರ್ಮಿಯಿಂದ ವಜಾಕ್ಕೆ ಆಗ್ರಹ

ರಾಯಚೂರು: ಲಿಂಗಸುಗೂರು ಕ್ಷೇತ್ರದ ಬಿಜೆಪಿ ಶಾಸಕ ಮಾನಪ್ಪ ವಜ್ಜಲ್ ಅವರ ಆಪ್ತ ಸಹಾಯಕ( ಪಿ.ಎ) ಹಾಗೂ ಪಿಡಿಒ ಆಗಿರುವ ಪ್ರವೀಣ ಕುಮಾರ ಕೆ,, ಇತ್ತೀಚೆಗೆ ನಡೆದ ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗವಹಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಭೀಮ್ ಆರ್ಮಿಯ ದೇವದುರ್ಗ ತಾಲೂಕು ಅಧ್ಯಕ್ಷ ವಿಶ್ವನಾಥ ಬಲ್ಲಿದವ ಒತ್ತಾಯಿಸಿದ್ದಾರೆ.
ಅವರಿಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, 100 ವರ್ಷ ಪೂರೈಸಿರುವ ಆರೆಸ್ಸೆಸ್ ಸಂಘಟನೆ ಇದುವರೆಗೆ ನೋಂದಣಿ ಮಾಡಿಕೊಂಡಿಲ್ಲ, ದೇಶದ ಹಲವೆಡೆ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗವಹಿಸಿದ ಆರೋಪ ಅನೇಕ ನಾಯಕರ ಮೇಲಿದೆ ಎಂದು ದೂರಿದರು.
ಸರ್ಕಾರಿ ಅಧಿಕಾರಿ ಆಗಿರುವ ಪ್ರದೀಣ ಕುಮಾರ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಶಾಸಕ ಮಾನಪ್ಪ ವಜ್ಜಲ್ ಅವರೊಂದಿಗೆ ಸಂಘದ ಸಮವಸ್ತ್ರ ಧರಿಸಿ ಕೈಯಲ್ಲಿ ಡೊಣ್ಣೆ ಹಿಡಿದು ಸಮಾಜದಲ್ಲಿ ಅಶಾಂತಿ ಸೃಷ್ಠಿ ಮಾಡಿದ್ದಲ್ಲದೇ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ವಿಭಜಕ ಶಕ್ತಿಗಳ ಜೊತೆ ಕೈಜೋಡಿಸಿದ್ದಾರೆ ಕೂಡಲೇ ಅವರನ್ನು ಅಮಾನತುಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಹೆಚ್ ಎಂ ಬಾಬು, ಭೀಮ್ ಆರ್ಮಿ ಜಿಲ್ಲಾಧ್ಯಕ್ಷ ಪ್ರವೀಣ ಕುಮಾರ, ದೀಪಕ್ ಭಂಡಾರಿ, ಬಾಬಾಉ ಖಾನ್,







