ರಾಯಚೂರು| ಅಕ್ರಮ ಮರಳು ಸಾಗಾಟದ ವೇಳೆ ಪೊಲೀಸರಿಂದ ದಾಳಿ: ಮರಳು ಸಹಿತ ಟ್ರ್ಯಾಕ್ಟರ್ ವಶಕ್ಕೆ

ರಾಯಚೂರು: ಅಕ್ರಮ ಮರಳು ಸಾಗಾಟ ಪತ್ತೆ ಹಚ್ಚಿದ ಪೊಲೀಸರು, ಮರಳು ಸಹಿತ ಟ್ರ್ಯಾಕ್ಟರನ್ನು ವಶಪಡಿಕೊಂಡ ಘಟನೆ ದೇವದುರ್ಗ ಪಟ್ಟಣದ ಹೇರುಂಡಿ ಗ್ರಾಮದ ಕೃಷ್ಣಾ ನದಿ ತೀರದಲ್ಲಿ ನಡೆದಿದೆ.
ಕೃಷ್ಣಾ ನದಿ ತೀರದಲ್ಲಿ ಅಕ್ರಮ ಮರಳು ಸಾಗಾಟದ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು, ಟ್ರ್ಯಾಕ್ಟರನ್ನು ವಶಕ್ಕೆ ಪಡೆದುಕೊಂಡಿದ್ದಾರೆ ಮತ್ತು 1.5 ಮೆಟ್ರಿಕ್ ಟನ್ ಮರಳನ್ನು ಜಪ್ತಿ ಮಾಡಿದ್ದಾರೆ.
ಈ ಕುರಿತು ದೇವದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





