ರಾಯಚೂರು | ಆ.17ರಂದು ಆರ್ಯವೈಶ್ಯ ಸಮಾಜದಿಂದ ಪ್ರತಿಭಾ ಪುರಸ್ಕಾರ

ರಾಯಚೂರು: ಆ.17 ರಂದು ನಗರದ ಪಂಡಿತ್ ಸಿದ್ದರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಆರ್ಯವೈಶ್ಯ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಆರ್ಯವೈಶ್ಯ ಅಧಿಕಾರಿಗಳ ಹಾಗೂ ವೃತ್ತಿನಿರತರ ಸಂಘದ ಕಾರ್ಯದರ್ಶಿ ಪೆಂಡ್ಯಾಲ ಕಿಶೋರ ತಿಳಿಸಿದರು.
ಅವರಿಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಆರ್ಯವೈಶ್ಯ ಅಧಿಕಾರಿಗಳ ಹಾಗೂ ವೃತ್ತಿನಿರತರ ಸಂಘದ ವತಿಯಿಂದ ಪ್ರತಿ ವರ್ಷ ಕಾರ್ಯಕ್ರಮ ಆಯೋಜಿಸಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡಲಾಗುತ್ತಿದೆ. ಕಾರ್ಯಕ್ರಮದ ಉದ್ಘಾಟನೆಯನ್ನು ಸಣ್ಣ ನೀರಾವರಿ ಸಚಿವ ಎನ್ ಎಸ್ ಬೋಸರಾಜು ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಡಾ. ಶಿವರಾಜ್ ಪಾಟೀಲ್ ಹಾಗೂ ಕರ್ನಾಟಕ ಹಾವೋಪಗಳ ಒಕ್ಕೂಟದ ಅಧ್ಯಕ್ಷ ಎಸ್ ಎಲ್ ಕೋರ ವಕೀಲರು ಆಗಮಿಸುತ್ತಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಮ್ಮ ಸಂಘದ ಜಿಲ್ಲಾಧ್ಯಕ್ಷರಾದ ಆಲೂರು ಬಿ ವೆಂಕಟೇಶ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಂಚಕೊಂಡ ನರಸಿಂಹಯ್ಯ, ಸಾವಿತ್ರಿ ಪುರುಷೋತ್ತಮ, ಗಣದಾಳ ಲಕ್ಷ್ಮಿಪತಿ ಜಗದೀಶ ಗುಪ್ತ ಕೊಂಡ ಅನಿಮೇಶ ಗಾರಲದಿನ್ನಿ, ತಿಪ್ಪಯ್ಯಶೆಟ್ಟಿ ಭೀಮಾಶಂಕರ್ ಗುರುಗುಂಟಿಯಾರ್ ಲಕ್ಷ್ಮಿ ಈ ಶಶಿರಾಜ್ ಸೇರಿದಂತೆ ಸಮಾಜದ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದರು.
ಸಮಾಜದ ಮುಖಂಡರಾದ ಬಿ.ವೆಂಕಟೇಶ ಆಲೂರು ,ಇಂದುವಾಸಿ ದತ್ತಾತ್ರೇಯ, ಹಿಂಗೋಲಿ ನರೇಂದ್ರ, ಬಿ.ಪ್ರಾಣೇಶ್ ಉಪಸ್ಥಿತರಿದ್ದರು.





