ರಾಯಚೂರು | ರಸ್ತೆ ಗುಂಡಿಗಳನ್ನು ಮುಚ್ಚಲು ಆಗ್ರಹಿಸಿ ಬಿಜೆಪಿ ಜಿಲ್ಲಾ ಘಟಕದಿಂದ ಪ್ರತಿಭಟನೆ

ರಾಯಚೂರು: ರಾಯಚೂರು ನಗರ, ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ರಸ್ತೆಗಳಲ್ಲಿ ಗುಂಡಿಗಳಿದ್ದು, ರಸ್ತೆ ದುರಸ್ತಿಗೊಳಿಸಲು ವಿಫಲವಾದ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಪಕ್ಷದ ಜಿಲ್ಲಾ ಘಟಕದ ವತಿಯಿಂದ ಪ್ರತಿಭಟನೆ ನಡೆಯಿತು.
ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಯಚೂರು ನಗರ, ಸೇರಿದಂತೆ ಅನೇಕ ಕಡೆಗಳಲ್ಲಿ ರಸ್ತೆಗಳೆಲ್ಲ ಕೆಟ್ಟು ಹೋಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅನುದಾನದ ಕೊರತೆಯಿಲ್ಲ ಎಂದು ಮಾಧ್ಯಮ ಗಳಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ ರಸ್ತೆಗಳು ಯಾಕೆ ದುರಸ್ತಿಗೊಳಿಸುತ್ತಿಲ್ಲ ಅನುದಾನ ಎಲ್ಲಿ ಹೋಗಿದೆ ಎಂದು ಪ್ರಶ್ನಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ರಮಾನಂದ ಯಾದವ್, ವಿಜಯಕುಮಾರ್ ಸಜ್ಜನ್, ಕಡಗೋಲ್ ಆಂಜನೇಯ, ರಾಜಕುಮಾರ, ಗುಡ್ಸಿ ನರಸಾರೆಡ್ಡಿ, ಪಿ.ಯಲ್ಲಪ್ಪ, ವಿನಾಯಕ ರಾವ್, ಕಾರ್ತಿಕ್ ರೆಡ್ಡಿ, ರವಿ ಗೌಡ, ಶಶಿರಾಜ್ ಮಸ್ಕಿ, ಯು ನರಸರೆಡ್ಡಿ, ನಾಗರಾಜ್, ಈ.ಶಶಿರಾಜ್, ತಿಮ್ಮಪ್ಪ ಪಿರಂಗಿ, ನರಸಪ್ಪ ಯಾಕ್ಲಾಸುಪುರು, ನಗರ ಮಂಡಲ ಅಧ್ಯಕ್ಷ ರಾಘವೇಂದ್ರ ಊಟ್ಕೂರು. ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಕಡಗೋಲ್, , ತಿರುಮಲ ರೆಡ್ಡಿ, ಬಂಗಿ ನರಸಾರೆಡ್ಡಿ, ನಾಗವೇಣಿ ಸಾವಕಾರ, ಅಶ್ವಿನಿ, ಅನಿತಾ, ವಿಜಯಲಕ್ಷ್ಮಿ, ವಿ.ಪಿ.ರೆಡ್ಡಿ, ರಾಜು, ಸುರೇಶ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.







