ರಾಯಚೂರು | ಕ್ಯಾಥೋಲಿಕ್ ಕನ್ಯಾಸ್ತ್ರಿಯರ ಮೇಲೆ ಹಲ್ಲೆ ಖಂಡಿಸಿ ಪ್ರತಿಭಟನೆ

ರಾಯಚೂರು: ಛತ್ತೀಸ್ ಗಢದಲ್ಲಿ ಕ್ಯಾಥೋಲಿಕ್ ಕನ್ಯಾಸ್ತ್ರೀಯರ ಮೇಲೆ ನಡೆದ ಹಲ್ಲೆ ಹಾಗೂ ಕಾನೂನು ಬಾಹಿರವಾಗಿ ನಡೆಸಲಾದ ಬಂಧನ ಪ್ರಕರಣವನ್ನು ತೀವ್ರವಾಗಿ ಖಂಡಿಸಿ, ನಗರದಲ್ಲಿ ಸೋಮವಾರ ಕ್ರೈಸ್ತ ಸಂಘಟನೆ ವತಿಯಿಂದ ಪ್ರತಿಭಟನೆ ನಡೆಯಿತು.
ಮಸ್ಕಿ ನಗರದ ಕೋರ್ಟ್ ಸರ್ಕಲ್‌ನಿಂದ ತಹಶೀಲ್ದಾರ್ ಕಚೇರಿಯವರೆಗೆ ಕೈಯಲ್ಲಿ ಬಿತ್ತಿ ಪತ್ರಗಳನ್ನು ಹಿಡಿದು ಮೌನವಾಗಿ ಮರೆವಣಿಗೆ ನಡೆಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಬಾಲಸ್ವಾಮಿ ಅವರು, ಕ್ಯಾಥೋಲಿಕ್ ಧರ್ಮಸಭೆಯ ಕನ್ಯಾಸ್ತ್ರೀಯರನ್ನು ಮಕ್ಕಳ ಸಾಗಾಟ ಮತ್ತು ಮತಾಂತರದಲ್ಲಿ ತೊಡಗಿರುವ ಧರ್ಮ ಪ್ರಚಾರಕರೆಂದು ಸುಳ್ಳು ಆರೋಪ ಹೊರಿಸಿ, ಪೊಲೀಸ್ ಠಾಣೆಗೆ ದೂರು ನೀಡಿ ಬಂಧಿಸಿರುವುದು ಖಂಡನೀಯ ಎಂದರು.
ಈ ವೇಳೆ ರಾಜ್ಯ ಮಹಿಳಾ ಒಕ್ಕೂಟ ಮೋಕ್ಷಮ್ಮ, ಫಾದರ್ ಕ್ಸೇವಿಯರ, ಸುರೇಶ್ ಅಂತರಗಂಗಿ, ರಾಯಪ್ಪ, ಶಾಂಭವಿ, ಮರಿಯಮ್ಮ ಹೊಸಳ್ಳಿ, ಇನ್ನಿತರರು ಉಪಸ್ಥಿತರಿದ್ದರು.
Next Story





