ರಾಯಚೂರು | ಉಪ ಲೋಕಾಯುಕ್ತರಿಂದ ಸಾರ್ವಜನಿಕ ಅಹವಾಲು ಸ್ವೀಕಾರ

ರಾಯಚೂರು, ಆ.30 : ಉಪ ಲೋಕಾಯುಕ್ತರಾದ ನ್ಯಾ.ಬಿ.ವೀರಪ್ಪ ಅವರು ಆ.30ರಂದು ಬೆಳಗ್ಗೆಯಿಂದ ಸಂಜೆ 7.15ರವರೆಗೆ ಸಾರ್ವಜನಿಕ ಅಹವಾಲು ಮತ್ತು ಬಾಕಿ ಅರ್ಜಿಗಳ ವಿಚಾರ ನಡೆಸಿದರು.
ಸಂಜೆ ವೇಳೆ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಹೊಸ ದೂರುಗಳನ್ನು ನೀಡಲು ಒಟ್ಟು 503 ಟೋಕನ್ ನೀಡಲಾಗಿತ್ತು. ಈ ಪೈಕಿ 260 ಹೊಸ ದೂರುಗಳನ್ನು ವಿಚಾರಣೆ ಮಾಡಿ ಅದರಲ್ಲಿ ಒಟ್ಟು 100 ದೂರು ಅರ್ಜಿಗಳನ್ನು ವಿಲೆ ಮಾಡಲಾಗಿದೆ. ಅದೇ ರೀತಿ ಒಟ್ಟು 125 ಬಾಕಿ ದೂರುಗಳನ್ನು ವಿಚಾರಣೆಗೆ ಕೈಗೆತ್ತಿಕೊಂಡು ಈ ಪೈಕಿ 71 ಪ್ರಕರಣಗಳನ್ನು ವಿಲೆ ಮಾಡಲಾಗಿದೆ ಎಂದರು.
ಆ.29 ಮತ್ತು 30ರಂದು ಎರಡು ದಿನಗಳ ಕಾಲ ಹೊಸ ಅರ್ಜಿಗಳು 503 ಮತ್ತು 125 ಬಾಕಿ ಅರ್ಜಿಗಳು ಸೇರಿ ಒಟ್ಟು ರಾಯಚೂರು ಜಿಲ್ಲೆಯಲ್ಲಿ 628 ಅರ್ಜಿಗಳ ಪೈಕಿ 171 ಪ್ರಕರಣಗಳನ್ನು ಮುಕ್ತಾಯ ಮಾಡಲಾಗಿದೆ ಎಂದು ಅವರು ತಿಳಿಸಿದರು.
Next Story





