ರಾಯಚೂರು | ಮಳೆಯಿಂದ ಮರ್ಚೆಡ್ ಗ್ರಾಮದ ಜಮೀನುಗಳ ರಸ್ತೆಗೆ ಹಾನಿ : ದುರಸ್ತಿಗೆ ಗ್ರಾಮಸ್ಥರ ಒತ್ತಾಯ

ರಾಯಚೂರು: ರಾಯಚೂರು ತಾಲೂಕಿನ ಮರ್ಚೆಡ್ ಗ್ರಾಮದ ರೈತರ ಹೊಲಗಳಿಗೆ ಮತ್ತು ವೆಂಕಟಾಪುರ ಗ್ರಾಮಕ್ಕೆ ಹೋಗುವ ರಸ್ತೆಯನ್ನು ದುರಸ್ತಿ ಮಾಡಬೇಕು ಎಂದು ಗ್ರಾಮಸ್ಥರು ಜಿಲ್ಲಾ ಪಂಚಾಯತ್ ಸಿಇಒಗೆ ಮನವಿ ಸಲ್ಲಿಸಿದರು
ತಾಲೂಕಿನ ಮರ್ಚೆಡ್ ಗ್ರಾಮದಲ್ಲಿ ಕಳೆದ ತಿಂಗಳಲ್ಲಿ ಸುರಿದ ಅತಿಯಾದ ಮಳೆಗೆ ರೈತರ ಹೊಲಗಳಿಗೆ ಹೋಗುವ ರಸ್ತೆಗಳು ಹಡೆಗಟ್ಟಿದ್ದು, ರೈತರು ಜಮೀನುಗಳಿಗೆ ತೆರಳಲು ಪರದಾಡುವ ಪರಿಸ್ಥಿತಿ ಉಂಟಾಗಿದೆ. ಈ ಹಿಂದೆಯೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಲೋಕೊಪಯೋಗಿ ಇಲಾಖೆಗಳಿಗೆ ಪತ್ರ ಬರೆದು ಸೂಚನೆ ನೀಡಿ ರಸ್ತೆಗಳನ್ನು ಸರಿಪಡಿಸಲು ತಿಳಿಸಿದ್ದಾರೆ.
ಈ ರಸ್ತೆ ಪಂಚಾಯತ್ ರಾಜ್ ಇಲಾಖೆಗೆ ಸೇರಿದ್ದರಿಂದ ದುರಸ್ಥಿ ಮಾಡಿಲ್ಲವೆಂದು ದೂರಿದರು. ರಸ್ತೆಯನ್ನು ದುರಸ್ತಿಗೊಳಿಸಿ ರೈತರು ಹೊಲಗಳಿಗೆ ತೆರಳಲು ಅನುಕೂಲ ಮಾಡಕೊಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಉಪಾಧ್ಯಕ್ಷ ಮುಜಾಹಿದ್ ಮರ್ಚೇಡ್, ದೇವಸೂಗುರು ಬ್ಲಾಕ್ ಕಾಂಗ್ರೆಸ್ ಸಮಿತಿ ಕಾರ್ಯದರ್ಶಿ ಮಹಾದೇವ, ಎಫ್.ಪಿ.ಒ ಅಧ್ಯಕ್ಷ ವೀರ ಶೇಖರಸ್ವಾಮಿ, ಮೃತ್ಯುಂಜಯ ಗೌಡ, ರಮೇಶ ಕೋಲಿ, ರಾಜು, ಆನಂದ ಕುಮಾರ ಸೇರಿದಂತೆ ಅನೇಕರು ಇದ್ದರು.





